ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ, ಮೆರವಣಿಗೆ ಮಾಡಿದ್ರು…! ಯಾಕೆ..?

masthmagaa.com:

ಉತ್ತರ ಪ್ರದೇಶ: ಇಡೀ ಮನುಷ್ಯಕುಲವೇ ನಾಚಿಕೆ ಪಡುವಂತಹ ಘಟನೆಯೊಂದು ನಡೆದಿದೆ. ರಾಜಧಾನಿ ಲಕ್ನೋದಿಂದ 122 ಕಿಲೋಮೀಟರ್ ದೂರದಲ್ಲಿರೋ ಕನೌಜ್​​ ಜಿಲ್ಲೆಯಲ್ಲಿ ಓರ್ವ ಮಹಿಳೆ ಮತ್ತು ವಿಶೇಷ ಚೇತನ ವ್ಯಕ್ತಿಯನ್ನು ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸಲಾಗಿದೆ. 37 ವರ್ಷದ ಮಹಿಳೆಯ ಪತಿ ಕೆಲ ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಇದಾದ ಬಳಿಕ 40 ವರ್ಷದ ವಿಶೇಷ ಚೇತನ ವ್ಯಕ್ತಿಯೊಬ್ಬರ ಜೊತೆ ಆಕೆ ಸ್ನೇಹ ಬೆಳೆಸಿದ್ದಳು.. ಇದನ್ನು ಸಹಿಸದ ಮಹಿಳೆ ಕುಟುಂಬಸ್ಥರು ಅವರಿಬ್ಬರ ತಲೆಬೋಳಿಸಿ, ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದು ಇಡೀ ಗ್ರಾಮದ ತುಂಬಾ ಮೆರವಣಿಗೆ ಮಾಡಿದ್ದಾರೆ. ಘಟನೆ ಸಂಬಂಧ ಎಫ್​ಐಆರ್ ದಾಖಲಿಸಲಾಗಿದ್ದು, ಮಹಿಳೆಯ 8 ಮಂದಿ ಸಂಬಂಧಿಕರನ್ನು ಅರೆಸ್ಟ್​ ಮಾಡಿದ್ದಾರೆ. ನಾಚಿಕೆಯ ವಿಚಾರ ಏನಂದ್ರೆ ಇಡೀ ಗ್ರಾಮದ ಜನರ ಮುಂದೆಯೇ ಇಷ್ಟೆಲ್ಲಾ ನಡೆದ್ರೂ ಯಾರೊಬ್ಬರು ತಡೆಯಲು ಮುಂದಾಗಲಿಲ್ಲ.. ಬದಲಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply