ಇಲ್ಲಿ ಜೀನ್ಸ್-ಟೀ ಶರ್ಟ್​ ಹಾಕ್ಕೊಂಡು ಬಂದ್ರೆ ಲೈಸೆನ್ಸ್ ಸಿಗಲ್ಲ..!

ಚೆನ್ನೈ: ತಮಿಳುನಾಡಿನಲ್ಲಿ ಜೀನ್ಸ್ ಪ್ಯಾಂಟ್ ಟೀ ಶರ್ಟ್​​ ಹಾಕ್ಕೊಂಡು ಡ್ರೈವಿಂಗ್ ಲೈಸೆನ್ಸ್ ಮಾಡಿಸೋಕೆ ಹೋದ್ರೆ ಕೆಲ್ಸ ಆಗಲ್ಲ. ಯಾಕಂದ್ರೆ ಇಲ್ಲಿ ಜೀನ್ಸ್ ಪ್ಯಾಂಟ್, ಟೀ ಶರ್ಟ್​​, ಬರ್ಮುಡಾದಂತಹ ಬಟ್ಟೆಗಳನ್ನು ಹಾಕ್ಕೊಂಡು ಹೋದ್ರೆ ಡ್ರೈವಿಂಗ್ ಲೈಸೆನ್ಸ್ ಸಿಗಲ್ಲ. ಇಲ್ಲಿನ ಕೆಕೆ ನಗರ ಆರ್​ಟಿಒ ಕಚೇರಿಯಲ್ಲಿ ಡ್ರೈವಿಂಗ್ ಟೆಸ್ಟ್​​​ಗೆ ಬಂದ ಯುವತಿಯೊಬ್ಬರನ್ನು ಜೀನ್ಸ್ ಪ್ಯಾಂಟ್ ಮತ್ತು ಸ್ಲೀವ್​ಲೆಸ್​ ಧರಿಸಿದ್ದಕ್ಕೆ ವಾಪಸ್ ಕಳುಹಿಸಲಾಗಿದೆ. ಅಲ್ಲದೆ ಸರಿಯಾದ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಬರುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲ. ಲುಂಗಿ, ಬರ್ಮುಡಾ ಧರಿಸಿಕೊಂಡು ಬಂದ ಪುರುಷರನ್ನು ಸಹ ವಾಪಸ್ ಕಳುಹಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್​ಟಿಒ ಅಧಿಕಾರಿಗಳು, ಇಲ್ಲಿಗೆ ಪ್ರತಿದಿನ ನೂರಾರು ಮಂದಿ ಬರುತ್ತಾರೆ. ಹೀಗಾಗಿ ಸರಿಯಾದ ಡ್ರೆಸ್ ಧರಿಸಿಕೊಂಡು ಬರುವಂತೆ ತಿಳಿಸುತ್ತೇವೆ. ‘ಇದ್ರಲ್ಲಿ ನೈತಿಕ ಪೊಲೀಸ್​​ಗಿರಿ ಏನೂ ಇಲ್ಲ ಎಂದಿದ್ದಾರೆ.

2018ರಲ್ಲೂ ಇಂಥದ್ದೇ ಘಟನೆಗಳು ವರದಿಯಾಗಿದ್ದವು.

Contact Us for Advertisement

Leave a Reply