ಕುವೈತ್​ನಲ್ಲಿ ಇನ್ಮುಂದೆ ಮಹಿಳೆಯರೂ ಸೇನೆಗೆ ಸೇರಲು ಅವಕಾಶ!

masthmagaa.com:

ಮುಸ್ಲಿಂ ದೇಶಗಳಾದ ಗಲ್ಫ್​ ದೇಶಗಳಲ್ಲಿ ಮಹಿಳೆಯರ ವಿಚಾರದಲ್ಲಿ ಒಂದೊಂದೇ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಅದೇ ರೀತಿ ಈಗ ಕುವೈತ್​​ನಲ್ಲೂ ಮಹಿಳೆಯರು ಸೇನೆಗೆ ಸೇರಲು ಅವಕಾಶ ನೀಡಲಾಗಿದೆ. ರಕ್ಷಣಾ ಸಚಿವ ಶೇಖ್ ಹಮದ್ ಜಬೇರ್​​ ಅಲ್ ಅಲಿ ಅಲ್ ಸಬಾಹ್​ ಈ ಬಗ್ಗೆ ಘೋಷಿಸಿದ್ದಾರೆ. ಕುವೈತ್ ಸೇನೆಯ ಬಾಗಿಲು ಮಹಿಳೆಯರಿಗೂ ತೆರೆಯಲಾಗಿದೆ. ಅವರು ಸೇನೆಯಲ್ಲಿ ವಿಶೇಷ ಅಧಿಕಾರಿ ಅಥವಾ ನಾನ್ ಕಮಿಷನ್ ಅಧಿಕಾರಿಯಾಗಿ ನಿಯೋಜನೆಗೊಳ್ಳಬಹುದು ಅಂತ ತಿಳಿಸಿದ್ದಾರೆ. ಅಂದಹಾಗೆ 2001ರಿಂದಲೇ ಕುವೈತ್ ಮಹಿಳೆಯರು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿತ್ತು. ಆದ್ರೆ ಸೇನೆಯಲ್ಲಿ ಕೇವಲ ನಾಗರಿಕ ಸೇವೆಗೆ ಮಾತ್ರವೇ ಮಹಿಳೆಯರು ಸೀಮಿತವಾಗಿದ್ರು. ಅಂದಹಾಗೆ ಕುವೈತ್ ಮಹಿಳೆಯರಿಗೆ 2005ರವರೆಗೂ ಮತದಾನದ ಹಕ್ಕೇ ಇರಲಿಲ್ಲ. ನಂತರದಲ್ಲಿ ಮತದಾನದ ಹಕ್ಕಿನ ಜೊತೆಗೆ ಕ್ಯಾಬಿನೆಟ್ ಮತ್ತು ಸಂಸತ್ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಆದ್ರೆ ಇತ್ತೀಚಿನ ಸಂಸತ್ ಚುನಾವಣೆಯಲ್ಲಿ ಮಹಿಳೆಯರಿಗೆ ಒಂದೇ ಒಂದು ಸ್ಥಾನ ಸಿಕ್ಕಿಲ್ಲ.

-masthmagaa.com

Contact Us for Advertisement

Leave a Reply