ಕೇಂದ್ರ ಸರ್ಕಾರಿ ನೌಕರರಿಗೆ ವರ್ಕ್​ ಫ್ರಂ ಹೋಂ ಆದೇಶ

masthmagaa.com:

ಅಧೀನ ಕಾರ್ಯದರ್ಶಿಗಳ ಹಂತದ ನೌಕರರ ಪೈಕಿ 50 ಪರ್ಸೆಂಟ್​​ನಷ್ಟು ಮಂದಿಗೆ ವರ್ಕ್​ ಫ್ರಂ ಹೋಂ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಸಿಬ್ಬಂದಿ ಸಚಿವಾಲಯದಿಂದ ಹೊರಬಿದ್ದಿರೋ ಆದೇಶದ ಪ್ರಕಾರ, ವಿಕಲಾಂಗ ಚೇತನರು ಮತ್ತು ಗರ್ಭಿಣಿಯರು ಕೂಡ ಕಚೇರಿಗೆ ಹಾಜರಾಗೋ ಅಗತ್ಯ ಇರೋದಿಲ್ಲ. ಇನ್ನು ಕಚೇರಿಯಲ್ಲಿ ಜನಸಂದಣಿ ಕಡಿಮೆ ಮಾಡಲು ಎರಡು ಶಿಫ್ಟ್​​ಗಳನ್ನು ಕೂಡ ಮಾಡಲಾಗಿದೆ. ಬೆಳಗ್ಗೆ 9ರಿಂದ 5.30ರವರಗೆ ಒಂದು ಶಿಫ್ಟ್​, 10ರಿಂದ 6.30ರವರೆಗೆ ಎರಡನೇ ಶಿಫ್ಟ್​​​ ಇರಲಿದೆ. ಕಂಟೈನ್​ಮೆಂಟ್ ಝೋನ್​​ನಲ್ಲಿರೋರು ಕೂಡ ಕಚೇರಿಗೆ ಬರೋದು ಕಡ್ಡಾಯವಲ್ಲ ಅಂತ ಕೇಂದ್ರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply