ತೈವಾನ್‌ನಲ್ಲಿ ಭಾರತೀಯ ವಲಸೆ ಕಾರ್ಮಿಕರಿಗೆ ಡಿಮಾಂಡ್‌!

masthmagaa.com:

ಗಡಿಯಲ್ಲಿ ಪದೇ ಪದೆ ಉಪಟಳ ಕೊಡೋ ಚೀನಾಗೆ ಠಕ್ಕರ್‌ ಕೊಡೋ ರೀತಿಯಲ್ಲಿ ಭಾರತ ತೈವಾನ್‌ ಜೊತೆಗೆ ಸಂಬಂಧ ಗಟ್ಟಿ ಮಾಡ್ಕೊಳ್ತಿದೆ. ಒನ್‌ ಚೀನಾ ಪಾಲಿಸಿ ಫಾಲೋ ಮಾಡುತ್ತಲ್ಲೇ ತೈವಾನ್‌ ಜೊತೆಗೆ ವ್ಯಾಪಾರ ಜಾಸ್ತಿ ಮಾಡ್ತಿದೆ. ಇದ್ರ ನಡುವೆ ಈಗ ಉಭಯ ದೇಶಗಳು ಮಹತ್ವದ ಒಪ್ಪಂದ ಒಂದಕ್ಕೆ ಸಹಿ ಹಾಕಿವೆ. ತೈವಾನ್‌ನಲ್ಲಿ ಕೆಲಸ ಮಾಡೋಕೆ ಕಾರ್ಮಿಕರನ್ನ ಕಳಿಸಲು ಭಾರತ ಒಪ್ಪಿಕೊಂಡಿದೆ. ಉಭಯ ದೇಶಗಳ ಅನಧಿಕೃತ ರಾಯಭಾರ ಕಚೇರಿಗಳಲ್ಲಿ ಒಪ್ಪಂದ ಮಾಡ್ಕೊಂಡು ಸಹಿ ಹಾಕಲಾಗಿದೆ. ಅಂದ್ಹಾಗೆ ಚೀನಾದಂತೆ ತೈವಾನ್‌ನಲ್ಲಿ ಕೂಡ ಜನ ಏಜ್‌ ಆಗ್ತಿದ್ದಾರೆ. ಯವಕರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಸೆಮಿಕಂಡಕ್ಟರ್‌ನಲ್ಲಿ ತೈವಾನ್‌ ವಿಶ್ವದ ಪವರ್‌ಹೌಸ್‌. ಅಲ್ಲಿನ ಚಿಪ್‌ ತಯಾರಿಕ ಕಂಪನಿಗಳಲ್ಲಿ ಕೆಲಸ ಮಾಡೋಕೆ ಜನ ಬೇಕೇ ಬೇಕು. ಇಷ್ಟು ದಿನ ತೈವಾನ್‌ ಸೌತ್‌ಈಸ್ಟ್‌ ಅಂದ್ರೆ ಈ ವಿಯಾಟ್ನಾಂ, ಫಿಲಿಫೀನ್ಸ್‌, ಥೈಲ್ಯಾಂಡ್‌ನಿಂದ ಜನರನ್ನ ಕರ್ಕೊಂಡು ಬರ್ತಿತ್ತು. ಸುಮಾರು 7 ಲಕ್ಷ ಜನ ವಲಸೆ ಕಾರ್ಮಿಕರು ತೈವಾನ್‌ನಲ್ಲಿ ಕೆಲಸ ಮಾಡ್ತಾರೆ. ಆದ್ರೀಗ ತೈವಾನ್‌ ಭಾರತದ ಕಡೆ ಮುಖಮಾಡಿದೆ. ಭಾರತ ಸ್ಕಿಲ್ಡ್‌ ಕಾರ್ಮಿಕರನ್ನ ಹೊಂದಿದೆ, ಅಲ್ಲಿನ ಜನ ಹಾರ್ಡ್‌ ವರ್ಕಿಂಗ್‌ ಅಂತ MOUಗೆ ಸಹಿ ಹಾಕೋವಾಗ ತೈವಾನ್‌ನ ಕಾರ್ಮಿಕ ಇಲಾಖೆ ಹೇಳಿದೆ. ಆದ್ರೆ ಭಾರತದ ಈ ನಿರ್ಧಾರದ ಹಿಂದೆ ಲೇಬರ್‌ ಡೈನಾಮಿಕ್ಸ್‌, ಅಂದ್ರೆ ಅವ್ರಿಗೆ ಕಾರ್ಮಿಕರು ಬೇಕು, ನಾವು ಕಳಿಸ್ತಿದ್ದೀವಿ ಅನ್ನೋದಷ್ಟೆ ಇಲ್ಲ. ಚೀನಾ ತೈವಾನ್‌ ಜೊತೆಗೆ ಯಾರೇ ಸಂಬಂಧ ವೃದ್ಧಿ ಮಾಡ್ಕೊಂಡ್ರು ಸಹಿಸಲ್ಲ. 1 ಚೀನಾ ಪಾಲಿಸಿ ಫಾಲೋ ಮಾಡಿ ಅಂತ ಕೇಳುತ್ತೆ. ಭಾರತ ಕೂಡ ಇಷ್ಟು ವರ್ಷ ಈ ಪಾಲಿಸಿಯನ್ನ ಒಪ್ಪಿಕೊಂಡು ಬಂದಿತ್ತು. ಆದ್ರೆ ಯಾವಾಗ ಚೀನಾ ಗಡಿಯಲ್ಲಿ ಬಾಲ ಬಿಚ್ಚೋಕೆ ಶುರು ಮಾಡ್ತೋ, ಭಾರತ ಕೂಡ ಚೀನಾಗೆ ಕೌಂಟರ್‌ ಕೊಡೋಕೆ ಶುರು ಮಾಡಿದೆ. ಒನ್‌ ಚೀನಾ ಪಾಲಿಸಿ ಅಂತ ಹೇಳ್ತಾನೆ ಮೆತ್ತಗೆ ತೈವಾನ್‌ ಜೊತೆ ಟ್ರೇಡ್‌ ಜಾಸ್ತಿ ಮಾಡ್ಕೋತಿದೆ. ತೈವಾನ್‌ನ ಟೆಕ್‌ ಹೂಡಿಕೆಗಳನ್ನ ಭಾರತದತ್ತ ಸೆಳೆಯೋಕೆ ನೋಡ್ತಿದೆ. ತೈವಾನ್‌ ಕೂಡ ಚೀನಾಗೆ ಉರಿಸೋಕೆ ಅಮೆರಿಕ, ಜಪಾನ್‌, ಆಸ್ಟ್ರೇಲಿಯಾ ಮತ್ತು ಭಾರತ ಜೊತೆಗೆ ರಿಲೇಶನ್‌ಶಿಪ್‌ ಗಟ್ಟಿ ಮಾಡ್ಕೋತಿದೆ. ಚೀನಾ ಪ್ಲಸ್‌ 1 ಹೆಸರಲ್ಲಿ ತೈವಾನ್‌ ಕಂಪನಿಗಳು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್‌ ಘಟಕಗಳನ್ನ ಸ್ಥಾಪಿಸ್ತಿವೆ. ಫಾಕ್ಸ್‌ಕಾನ್‌ ಭಾರತದಲ್ಲಿ ದೊಡ್ಡಮಟ್ಟಿಗೆ ಸದ್ದು ಮಾಡ್ತಿದೆ. ಇದ್ರಿಂದ ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಕ್ಷೇತ್ರದಲ್ಲಿ ಚೀನಾದ ಡಾಮಿನೆನ್ಸ್‌ಗೆ ಕೂಡ ಹೊಡೆತ ಬೀಳ್ತಿದೆ. ಇನ್ನು ಈ ಲೇಬರ್‌ ಪ್ರೊಗ್ರಾಂನಿಂದ ಇಂಡೋ-ತೈವಾನ್‌ ಸಂಬಂಧದಲ್ಲಿ ದೊಡ್ಡ ತಿರುವು ಕಾಣ್ಬಹುದು ಅಂತ ಹೇಳಲಾಗ್ತಿದೆ. ಅಂದ್ಹಾಗೆ ಕೇವಲ ತೈವಾನ್‌ ಅಷ್ಟೇ ಅಂತಲ್ಲ ಇತ್ತೀಚೆಗೆ ಭಾರತ ಇಸ್ರೇಲ್‌ಗೆ ಕೂಡ ಕಾರ್ಮಿಕರನ್ನ ಕಳಿಸೋ ಒಪ್ಪಂದಕ್ಕೆ ಸೈನ್‌ ಹಾಕಿತ್ತು.

-masthmagaa.com

Contact Us for Advertisement

Leave a Reply