ಭಾರತದ UPI ಸಿಸ್ಟಮ್‌ ಅಳವಡಿಸಿಕೊಳ್ಳಲು ಒಲವು ತೋರಿದ ಮಲೇಷ್ಯಾ!

masthmagaa.com:

ಭಾರತ ಮತ್ತು ಮಲೇಷ್ಯಾ ನಡುವೆ ದ್ವಿಪಕ್ಷೀಯ ಸಹಕಾರ ವಿಸ್ತರಿಸೋ ಕುರಿತು ಉಭಯ ದೇಶಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿ ನಡೆದ 6ನೇ ಭಾರತ-ಮಲೇಷ್ಯಾ ಜಾಯಿಂಟ್‌ ಕಮಿಷನ್‌ ಮೀಟಿಂಗ್‌ನಲ್ಲಿ, ರಕ್ಷಣೆ, ವ್ಯಾಪಾರ, ಇನ್ವೆಸ್ಟ್‌ಮೆಂಟ್‌ ಮತ್ತು ಎನರ್ಜಿ ಕ್ಷೇತ್ರದಲ್ಲಿ ಸಹಕಾರ ವಿಸ್ತಾರ ಮಾಡೋ ವಿಚಾರದ ಮೇಲೆ ಫೋಕಸ್‌ ಮಾಡಲಾಗಿದೆ. ಹೀಗಂತ ಭಾರತ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ. ಇದೇ ವೇಳೆ ಮಾತಾಡಿರುವ ಮಲೇಷ್ಯಾ ವಿದೇಶಾಂಗ ಸಚಿವ ಜಾಂಬ್ರಿ ಅಬ್ದುಲ್‌ ಕದಿರ್‌, ವಾಣಿಜ್ಯ ಕ್ಷೇತ್ರಕ್ಕೆ ಬೂಸ್ಟ್‌ ನೀಡಲು ವ್ಯಾಪಾರ ವ್ಯವಸ್ಥೆಯಲ್ಲಿ ದೇಶೀಯ ಕರೆನ್ಸಿಯನ್ನೇ ಬಳಸೋದಕ್ಕೆ ಉಭಯ ದೇಶಗಳು ಚಿಂತನೆನ್ನ ನಡೆಸಿವೆ. ಈ ಕಾರಣಕ್ಕೆ ಭಾರತದ UPI ಸಿಸ್ಟಮ್‌ ಮತ್ತು RuPay payment ಸೇವೆ ಅಳವಡಿಸಿಕೊ‍ಳ್ಳಲು ಮಲೇಷ್ಯಾ ಕೆಲಸ ಮಾಡ್ತಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ 12 ವರ್ಷಗಳ ನಂತರ ಈ ಮೀಟಿಂಗ್‌ ನಡೆಸಲಾಗ್ತಿದ್ದು, ಕಳೆದ ಜೆಸಿಎಮ್‌ ಮೀಟಿಂಗ್‌ 2011ರಲ್ಲಿ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆದಿತ್ತು.

-masthmagaa.com

Contact Us for Advertisement

Leave a Reply