ಕುಸಿಯಲಿದೆ ಚೀನಾ ಆರ್ಥಿಕ ಬೆಳವಣಿಗೆ! ವಿಶ್ವ ಬ್ಯಾಂಕ್​​ ಹೇಳಿದ್ದೇನು

masthmagaa.com:

ಚೀನಾ ಸೇರಿದಂತೆ ಪೂರ್ವ ಏಷ್ಯಾ ಮತ್ತು ಪೆಸಿಫಿಕ್​ ಭಾಗದಲ್ಲಿ ಬರುವ ದೇಶಗಳ 2022ರ ಆರ್ಥಿಕ ಬೆಳವಣಿಗೆ ದರವನ್ನ ವಿಶ್ವ ಬ್ಯಾಂಕ್​ ಕಮ್ಮಿ ಮಾಡಿದೆ. 2021ರ ಅಕ್ಟೋಬರ್​ನಲ್ಲಿ ಫೋರ್​ಕಾಸ್ಟ್​ ಮಾಡ್ದಾಗ ಪೂರ್ವ ಏಷ್ಯಾ ಮತ್ತು ಪೆಸಿಫಿಕ್​ ಭಾಗದಲ್ಲಿ 5.4 ಪರ್ಸೆಂಟ್​ ಗ್ರೋಥ್​ ಅನ್ನ ಫೋರ್​​ಕಾಸ್ಟ್​ ಮಾಡಲಾಗಿತ್ತು. ಆದ್ರೀಗ ಅದನ್ನ ಪಾಯಿಂಟ್​ ಫೋರ್​ ಪರ್ಸೆಂಟ್​ನಷ್ಟು ಕಮ್ಮಿ ಮಾಡಿ 5 ಪರ್ಸೆಂಟ್​​ಗೆ ಇಳಿಸಲಾಗಿದೆ. ಯುಕ್ರೇನ್​-ರಷ್ಯಾ ಯುದ್ಧ, ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಚೀನಾದಲ್ಲಿ ಬೆಳವಣಿಗೆ ದರ ಕಮ್ಮಿಯಾಗಿರೋದೇ ಇದಕ್ಕೆ ಕಾರಣ ಅಂತೇಳಿದೆ. ಒಂದ್ವೇಳೆ ಯುಕ್ರೇನ್​ನಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ರೆ, 4 ಪರ್ಸೆಂಟ್​ಗೆ ಇಳೀಬಹುದು ಅಂತಾನೂ ವರ್ಲ್ಡ್ ಬ್ಯಾಂಕ್ ಹೇಳಿದೆ. 2022ರಲ್ಲಿ ಚೀನಾದ ಆರ್ಥಿಕತೆ 5.4 ಪರ್ಸೆಂಟ್​ ಬದಲಾಗಿ 5 ಪರ್ಸೆಂಟ್​ನಷ್ಟು ಬೆಳವಣಿಗೆ ಕಾಣಲಿದೆ. ಸೌತ್​ಈಸ್ಟ್ ಏಷ್ಯಾದ ಫಿಲಿಪ್ಪೀನ್ಸ್​​ 5.7 ಪರ್ಸೆಂಟ್​ನಷ್ಟು ಆರ್ಥಿಕ ಬೆಳವಣಿಗೆ ಕಾಣಲಿದೆ. ನಂತರದ ಸ್ಥಾನದಲ್ಲಿ ಮಲೇಷ್ಯಾ, ವಿಯೆಟ್ನಾಂ ಮತ್ತು ಇಂಡೋನೇಷ್ಯಾ ದೇಶಗಳಿವೆ.

-masthmagaa.com

 

Contact Us for Advertisement

Leave a Reply