ಹೆಚ್ಚಾಯ್ತು ವರ್ಲ್ಡ್‌ ಕಪ್‌ ಫೀವರ್‌: ದುಬಾರಿಯಾಯ್ತು ಅಹಮದಾಬಾದ್‌!

masthmagaa.com:

ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರೋ ಐಸಿಸಿ ವಿಶ್ವಕಪ್‌ 2023 ಫೈನಲ್ಸ್‌ಗೆ ಎಲ್ಲರೂ ಅತ್ಯಂತ ಕಾತುರದಿಂದ ಕಾಯ್ತಾ ಇದ್ದಾರೆ. ಫೈನಲ್ಸ್‌ಗೆ ಭಾರತ ಎಂಟ್ರಿ ಕೊಟ್ಟಿರೋದ್ರಿಂದ, ಭಾರತೀಯರಿಗಂತೂ ಈ ವರ್ಷ ಡಬಲ್‌ ದೀಪಾವಳಿ ಆಚರಿಸಿದ ಸಂಭ್ರಮ. ಆದ್ರೆ ಇದೀಗ ವಿಶ್ವಕಪ್‌ ಫೈನಲ್ಸ್‌ ಹಿನ್ನಲೆಯಲ್ಲಿ ಅಹಮದಾಬಾದ್‌ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಅಹಮದಾಬಾದ್‌ಗೆ ಹೋಗಿ ಅಲ್ಲೇ ಇದ್ದು ವರ್ಲ್ಡ್‌ ಕಪ್ ಫೈನಲ್‌ ನೋಡ್ತೀನಿ ಅನ್ನೋರ ಎದೆ ಒಡೆದು ಹೋಗೋದಂತು ಗ್ಯಾರಂಟಿ. ಯಾಕಂದ್ರೆ ಗುಜರಾತ್‌ನ ಅಹಮದಾಬಾದ್‌ನಲ್ಲಿರೋ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್‌ ಮ್ಯಾಚ್‌ ನಡೆಯಲಿರೋ ಕಾರಣ, ಈ ನಗರದಲ್ಲಿ ಎಲ್ಲದ್ರ ರೇಟ್‌ ಇದೀಗ ಗಗನಕ್ಕೇರಿದೆ. ಇಲ್ಲಿನ ಹೋಟೆಲ್‌ ರೂಮ್ಸ್‌ ಮತ್ತು ಫ್ಲೈಟ್‌ ಟಿಕೆಟ್ಸ್‌ ಬೆಲೆ ಹೇಳಲಾರದಷ್ಟು ಜಾಸ್ತಿಯಾಗಿವೆ. ಜನಪ್ರಿಯ ಟ್ರಾವೆಲ್‌ ಬುಕಿಂಗ್‌ ಸೈಟ್‌ಗಳಾದ Make My Trip ಹಾಗೂ Booking.com ಸೈಟ್‌ಗಳಲ್ಲಿ ಅಹಮದಾಬಾದ್‌ನ ಹೆಚ್ಚಿನ ಹೋಟೆಲ್‌ಗಳಲ್ಲಿ ಶನಿವಾರ ಮತ್ತು ಭಾನುವಾರದಂದು, ಒನ್‌ ನೈಟ್‌ ಸ್ಟೇಗೆ ಅಂದ್ರೆ ಒಂದು ರಾತ್ರಿ ಉಳಿದುಕೊಳ್ಳೋಕೆ 40 ಸಾವಿರ ರೂಪಾಯಿಗೂ ಅಧಿಕ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಅಹಮದಾಬಾದ್‌ನ ಫೈವ್‌ ಸ್ಟಾರ್‌ ಹೋಟೆಲ್‌ ಒಂದ್ರಲ್ಲಿ ಶನಿವಾರ ಮತ್ತು ಭಾನುವಾರದಂದು ರೂಮ್‌ನ ಬೆಲೆ 70 ಸಾವಿರಕ್ಕೆ ಏರಿಕೆಯಾಗಿರೋದು ಕೇಳಿ ಶಾಕ್‌ ಆಯ್ತು ಅಂತ ಕ್ರಿಕೆಟ್‌ ಅಭಿಮಾನಿಯೊಬ್ರು ಹೇಳಿಕೊಂಡಿದ್ದಾರೆ. ಅಂದ್ಹಾಗೆ ಸಾಮಾನ್ಯವಾಗಿ ಇತರೆ ದಿನಗಳಲ್ಲಿ ಅಲ್ಲಿನ ಹೋಟೆಲ್ಸ್‌ನ ಬೆಲೆ 9 ಸಾವಿರ ಇರ್ತಾ ಇತ್ತು.

-masthmagaa.com

Contact Us for Advertisement

Leave a Reply