ಉತ್ತರ ಕೊರಿಯಾಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನವೀಯ ನೆರವು!

masthmagaa.com:

ಉತ್ತರ ಕೊರಿಯಾದಲ್ಲಿ ಕೊರೋನಾ ಹೆಚ್ಚಿರೋ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವು ನೀಡೋದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಚೀನಾ ಗಡಿಭಾಗದ ಬಂದರು ದಲಿಯಾನ್ ಮೂಲಕ ಈ ನೆರವು ನೀಡ್ತೀವಿ ಅಂತ ತನ್ನ ದಕ್ಷಿಣ ಮತ್ತು ಪೂರ್ವ ಏಷ್ಯಾಗೆ ಸಂಬಂಧಿಸಿದ ವಾರದ ವರದಿಯಲ್ಲಿ ತಿಳಿಸಿದೆ. ಈಗಾಗಲೇ ಅಗತ್ಯ ವೈದ್ಯಕೀಯ ವಸ್ತುಗಳನ್ನು ಕಳುಹಿಸಿದ್ದೀವಿ ಅಂತ ಹೇಳಿದೆಯಾದ್ರೂ ಅದು ಉತ್ತರ ಕೊರಿಯಾಗೆ ತಲುಪಿದ್ಯಾ..? ಅನ್ನೋದನ್ನ ಸ್ಪಷ್ಟಪಡಿಸಿಲ್ಲ. ಅಂದಹಾಗೆ ಉತ್ತರ ಕೊರಿಯಾದ ಕೊರೋನಾ ಹಾವಳಿ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಕೊರೋನ ಬಂದ ಕೂಡಲೇ ಉತ್ತರ ಕೊರಿಯಾ ತನ್ನ ಎಲ್ಲಾ ಗಡಿಗಳನ್ನು ಕಂಪ್ಲೀಟಾಗಿ ಬಂದ್ ಮಾಡ್ಕೊಂಡಿತ್ತು. ಅಲ್ಲಿ ಸೆಪ್ಟೆಂಬರ್ 23ರವರೆಗೆ 40700 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಯಾರಿಗೂ ಪಾಸಿಟಿವ್ ಬಂದಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದ್ರೆ ಅಲ್ಲಿನ ವಾಸ್ತವ ಏನು ಅಂತ ಯಾರಿಗೂ ಗೊತ್ತಿಲ್ಲ. ಈ ಹಿಂದೆ ಅಲ್ಲಿ ಕೊರೋನಾ ಜಾಸ್ತಿಯಾಗಿದೆ.. ಕೊರೋನಾ ರೋಗಿಗಳನ್ನು ಗುಂಡಿಟ್ಟು ಕೊಲ್ಲಲು ಆದೇಶಿಸಲಾಗಿದೆ ಅಂತೆಲ್ಲಾ ಸುದ್ದಿಗಳು ವರದಿಯಾಗಿದ್ವು.

-masthmagaa.com

Contact Us for Advertisement

Leave a Reply