ಹಂಪಿಯಲ್ಲಿ ಇಂದಿನಿಂದ ಜುಲೈ16ವರೆಗೆ ಜಿ20 ಪೂರ್ವಸಭೆ!

masthmagaa.com:

ಭಾರತದಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಶೃಂಗಸಭೆ ಭಾಗವಾಗಿ ವಿಜಯನಗರದ ಹಂಪಿಯಲ್ಲಿ 3ನೇ ಕಲ್ಚರಲ್‌ ವರ್ಕಿಂಗ್‌ ಗ್ರೂಪ್‌ ಸಭೆ ಇಂದಿನಿಂದ ಆರಂಭವಾಗಿದೆ. ಜುಲೈ 12ರವರೆಗೆ ನಡೆಯಲಿರುವ ಈ ಸಭೆಯಲ್ಲಿ 32 ದೇಶಗಳ 52 ಪ್ರತಿನಿಧಿಗಳು ಹಾಗೂ 200ಕ್ಕೂ ಹೆಚ್ಚು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಜುಲೈ 13ರಿಂದ 16ವರೆಗೆ 3ನೇ ಶೆರ್ಪಾ ಸಭೆ ಹಂಪಿ ಸಮೀಪದ ಕಮಲಾಪುರ ಆರೆಂಜ್‌ ಕೌಂಟಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಜಿ20 ರಾಷ್ಟ್ರಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು, 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಹಾಗೂ 4 ಅಂತರರಾಷ್ಟ್ರೀಯ ಸಂಘಟನೆಗಳ 6 ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ದೆ ಜುಲೈ 10 ಮತ್ತು 14ರಂದು ವಿದೇಶಿ ಗಣ್ಯರು ಹಂಪಿಯ ಕೆಲವು ಸ್ಮಾರಕಗಳನ್ನು ನೋಡಲಿದ್ದು, ಅವರು ಭೇಟಿ ನೀಡುವುದಕ್ಕೆ ಕೇವಲ ಎರಡು ಗಂಟೆ ಮೊದಲು ಇತರ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗುವುದು. ಉಳಿದಂತೆ ಪ್ರವಾಸಿಗರು ಹಂಪಿಗೆ ಬರುವುದಕ್ಕೆ ಯಾವುದೇ ನಿರ್ಬಂಧ ಇಲ್ಲ ಅಂತ ಜಿಲ್ಲಾಧಿಕಾರಿ ವೆಂಕಟೇಶ್‌ ಟಿ ಅವ್ರು ತಿಳಿಸಿದ್ದಾರೆ. ಅಂದ್ಹಾಗೆ ಹಂಪಿಯಲ್ಲಿ ಜಿ20 ಸಭೆ ಹಿನ್ನಲೆಯಲ್ಲಿ ರೋಡ್‌ಗಳಿಗೆ ಡಾಂಬಾರು ಹಾಕಿ ಸ್ವಚ್ಛಗೊಳಿಸಲಾಗಿದೆ.

-masthmagaa.com

Contact Us for Advertisement

Leave a Reply