ವಿದೇಶಿ ಮಾಧ್ಯಮಗಳಲ್ಲಿ ಮೋದಿ ಸರ್ಕಾರಕ್ಕೆ ಟೀಕೆ!

masthmagaa.com:

ಕೊರೋನಾ ವಿಚಾರವಾಗಿ ಭಾರತದ ಪ್ರಧಾನಿ ಮೋದಿ ಸರ್ಕಾರವನ್ನು ವಿದೇಶಿ ಮಾಧ್ಯಮಗಳು ಕಟಕಟೆಯಲ್ಲಿ ನಿಲ್ಲಿಸಿವೆ. ಅಮೆರಿಕದ ಟೈಮ್ಸ್​ ಮ್ಯಾಗ್ಜೀನ್​ನಲ್ಲಿ ಹೌ ಮೋದಿ ಫೇಲ್ಡ್​ ಅಸ್ ಎಂಬ ಹೆಸರಲ್ಲಿ ಲೇಖನ ಪ್ರಕಟವಾಗಿದ್ದು, ಅದರಲ್ಲಿ ಭಾರತ ಸರ್ಕಾರ ಕೆಲವೊಂದು ವಿಚಾರಗಳಲ್ಲಿ ನಿರ್ಲಕ್ಷ್ಯ ವಹಿಸಿತು. 2ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುವಲ್ಲಿಯೂ ವಿಫಲವಾಯ್ತು. ಕುಂಭಮೇಳದಲ್ಲಿ ಸಾಂಕೇತಿಕವಾಗಿ ಮಾತ್ರ ಭಾಗಿಯಾಗಿ ಅಂತ ಕರೆ ನೀಡುವಲ್ಲಿ ಪ್ರಧಾನಿ ಮೋದಿ ಕೂಡ ವಿಫಲವಾದ್ರು. ದೇಶದಲ್ಲಿ ಸಾವಿರಾರು ಜನ ಸಾಯುತ್ತಿರುವಾಗ ರಾಜಕಾರಣಿಗಳು ಚುನಾವಣಾ ರ್ಯಾಲಿಯಲ್ಲಿ ಬ್ಯುಸಿಯಾಗಿದ್ರು ಅಂತ ಟೀಕಿಸಲಾಗಿದೆ. ಅದೇ ರೀತಿ ನ್ಯೂಯಾರ್ಕ್ ಟೈಮ್ಸ್​ನಲ್ಲೂ ಈ ಬಗ್ಗೆ ಲೇಖನ ಪ್ರಕಟವಾಗಿದ್ದು, ಭಾರತ ಸರ್ಕಾರ ಸಾವಿನ ಸಂಖ್ಯೆಯನ್ನು ಮುಚ್ಚಿಡ್ತಾ ಇದೆ. ಕೊರೋನಾಗೆ ಬಲಿಯಾದ್ರೂ ಬೇರೆ ಕಾಯಿಲೆಗೆ ಬಲಿಯಾಗಿದ್ದಾರೆ ಅಂತ ಹೇಳಿ ಕೊರೋನಾಗೆ ಬಲಿಯಾದವರ ಸಂಖ್ಯೆ ಮುಚ್ಚಿಡಲಾಗ್ತಿದೆ ಅಂತ ಆರೋಪಿಸಲಾಗಿದೆ.

-masthmagaa.com

Contact Us for Advertisement

Leave a Reply