ಸೂಪರ್ ಪವರ್ ದೇಶಗಳ ಅಣ್ವಸ್ತ್ರ ಆಟ! ಏನಿದರ ಮರ್ಮ?

masthmagaa.com:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 5 ಖಾಯಂ ಸದಸ್ಯತ್ವ ಹೊಂದಿರೋ ದೇಶಗಳು ಪರಮಾಣು ಶಸ್ತ್ರಾಸ್ತ್ರ ಸಂಬಂಧ ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಪರಮಾಣು ಶಸ್ತ್ರಾಸ್ತ್ರ ಹರಡೋಕೆ ಬಿಡೋದಿಲ್ಲ.. ಮತ್ತು ಪರಮಾಣು ದೇಶಗಳ ನಡುವಿನ ಸಂಭಾವ್ಯ ಯುದ್ಧವನ್ನು ಕೂಡ ತಡೆಯಬೇಕು ಅಂತ ಅಮೆರಿಕ, ಚೀನಾ, ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್​​​​​​ ಕರೆ ನೀಡಿವೆ. ಪರಮಾಣು ಯುದ್ಧವನ್ನು ಎಲ್ಲೋಕೆ ಸಾಧ್ಯವಿಲ್ಲ.. ಹೀಗಾಗಿ ಅದನ್ನು ಮಾಡಲೇಬಾರದು ಅಂತ ಹೇಳಲಾಗಿದೆ. ಈ ಜಂಟಿ ಹೇಳಿಕೆಯನ್ನು ರಷ್ಯಾದ ಕ್ರೆಮ್ಲಿನ್ ಕಡೆಯಿಂದ ಪಬ್ಲಿಶ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಚೀನಾದ ಉಪ ವಿದೇಶಾಂಗ ಸಚಿವ ಮಾ ಝಾವ್​​ಕ್ಸು, ಈ ಜಂಟಿ ಹೇಳಿಕೆ ದೇಶಗಳ ನಡುವಿನ ನಂಬಿಕೆ ಹೆಚ್ಚುವಂತೆ ಮಾಡುತ್ತೆ. ಜಾಗತಿಕ ಶಕ್ತಿಗಳ ನಡುವಿನ ಸ್ಪರ್ಧೆಯನ್ನು ಪರಸ್ಪರ ಸಮನ್ವಯ ಮತ್ತು ಸಹಕಾರಕ್ಕೆ ಪರಿವರ್ತಿಸಲಿದೆ ಅಂತ ಹೇಳಿದ್ರು. ಆದ್ರೆ ಒಂದೇ ದಿನಕ್ಕೆ ಉಲ್ಟಾ ಒಡೆದಿರೋ ಚೀನಾ, ಅಮೆರಿಕ ಮತ್ತು ರಷ್ಯಾ ತಮ್ಮ ಬಳಿ ಇರೋ ಶಸ್ತ್ರಾಸ್ತ್ರ ಪ್ರಮಾಣವನ್ನು ಕಡಿಮೆ ಮಾಡಬೇಕು.. ಚೀನಾ ವಿಶ್ವಾಸಾರ್ಹತೆ ಮತ್ತು ಸುರಕ್ಷತೆ ಸಮಸ್ಯೆ ಗಮನದಲ್ಲಿಟ್ಟುಕೊಂಡು ತನ್ನ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ಮುಂದುವರಿಸಲಿದೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply