ತನ್ನ ತಟ್ಟೆಲಿ ಹೆಗ್ಗಣ ಇಟ್ಟುಕೊಂಡು, ಅಫ್ಘಾನಿಸ್ತಾನ ತಟ್ಟೆಲಿ ನೊಣ ಹುಡುಕಿದ ಪಾಕ್!

masthmagaa.com:

ಇಷ್ಟು ದಿನ ತಾಲಿಬಾನ್ ಅನ್ನೋ ಹಾವನ್ನ ತನ್ನ ಹಿತ್ತಲಲ್ಲಿ ಸಾಕಿದ ಪಾಕಿಸ್ತಾನ ಈಗ ಇಡೀ ಜಗತ್ತಿಗೆ ಉಪದೇಶ ಮಾಡಿದೆ. ಈ ಕೂಡಲೇ ವಿಶ್ವ ಸಮುದಾಯ ಹಸಿವಿನಿಂದ ಬಳಲ್ತಿರೋ ಆಫ್ಘನ್ ಜನತೆಗೆ ಆಹಾರ ದಾನ ಮಾಡಬೇಕು. ಎರಡನೇದಾಗಿ ಅಫ್ಘಾನಿಸ್ತಾನದಲ್ಲಿ ಎಲ್ಲರನ್ನೂ ಒಳಗೊಂಡ ಸರ್ವಸಮ್ಮತಿಯ ಸರ್ಕಾರ ಬರೋ ಹಾಗೆ ಒತ್ತಡ ಹೇರಬೇಕು. ಮೂರನೇದಾಗಿ ಆಫ್ಘನ್ ನೆಲದಲ್ಲಿರೋ ಎಲ್ಲ ಉಗ್ರ ಸಂಘಟನೆಗಳ ಮೇಲೆ ತಾಲಿಬಾನಿಗಳು ಕ್ರಮ ಕೈಗೊಳ್ಳುವಂತೆ ಫೋರ್ಸ್ ಮಾಡಬೇಕು ಅಂತ ಪಾಕಿಸ್ತಾನ ಆಗ್ರಹ ಮಾಡಿದೆ. ವಿಶ್ವ ಸಂಸ್ಥೆಗೆ ಪಾಕ್ ಅಂಬಾಸಡರ್ ಆಗಿರೋ ಮುನೀರ್ ಅಕ್ರಮ್ ಈ ರೀತಿ ಮಾತಾಡಿದ್ದಾರೆ. ಎಂಥಾ ಹೋಪ್ಲೆಸ್ ಹೇಳಿಕೆ ಇದೆ. ತನ್ನ ದೇಶದಲ್ಲೇ ಗಲ್ಲಿಗಲ್ಲಿಯಲ್ಲೂ ಉಗ್ರರನ್ನ ಫಾರಂ ಕೋಳಿ ಸಾಕಿದಂತೆ ಸಾಕ್ತಿರೋ ಪಾಕಿಸ್ತಾನ ಅಫ್ಘಾನಿಸ್ತಾನದಲ್ಲಿ ಉಗ್ರ ನಿರ್ಮೂಲನೆ ಬಗ್ಗೆ ಮಾತಾಡ್ತಿದೆ. ಇದನ್ನೆಲ್ಲ ಕೇಳೋಕೆ ಕಿವಿಗೇ ಹೇಸಿಗೆ ಉಂಟಾಗುತ್ತೆ.

-masthmagaa.com

Contact Us for Advertisement

Leave a Reply