masthmagaa.com:

ಜಗತ್ತು ಇನ್ನು ಕೇವಲ ನಾಲ್ಕು ವಾರಗಳಲ್ಲಿ ಮತ್ತೊಂದು ಮಹಾಯುದ್ಧವನ್ನ ಎದುರಿಸಲಿದೆ ಅಂತ ರಷ್ಯಾದ ಮಿಲಿಟರಿ ತಜ್ಞನ ಹೇಳಿಕೆ ಜಾಗತಿಕ ಆತಂಕ ಸೃಷ್ಟಿಸಿದೆ. ರಷ್ಯಾ-ಉಕ್ರೇನ್ ನಡುವೆ ಉದ್ಭವಿಸಿರುವ ಮಿಲಿಟರಿ ಬಿಕ್ಕಟ್ಟು ಜಗತ್ತನ್ನ ಅಥವಾ ಕನಿಷ್ಠ ಯುರೋಪ್‌ ಖಂಡವನ್ನ ಮಹಾಯುದ್ಧದ ಅಂಚಿಗೆ ತಳ್ಳಲಿದೆ ಅಂತ ಮಿಲಿಟರಿ ತಜ್ಞ ಪಾವೆಲ್ ಫೆಲ್ಗೆನ್ಹೌರ್ ಅಭಿಪ್ರಾಯಪಟ್ಟಿದ್ದಾರೆ. ಅಂದ್ಹಾಗೆ ಉಕ್ರೇನ್ ಗಡಿಗೆ ರಷ್ಯಾ 4,000 ಸೈನಿಕರು ಮತ್ತು ಯುದ್ಧ ಟ್ಯಾಂಕ್‌ಗಳನ್ನ ರವಾನಿಸಿದೆ. ಮೇ ಆರಂಭದಲ್ಲಿ ರಷ್ಯಾದಲ್ಲಿ ರೆಡ್​ ಸ್ಕ್ವೇರ್ ಪರೇಡ್ ನಡೆಯಲಿದೆ. ಎರಡನೇ ಮಹಾಯುದ್ಧದಲ್ಲಿ ರಷ್ಯಾ ಸಾಧಿಸಿದ ಗೆಲುವಿನ ವಾರ್ಷಿಕೋತ್ಸವ ನಡೆಯಲಿದೆ. ಆ ಸಮಯದಲ್ಲಿ ಮಹಾಯುದ್ಧಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ರಷ್ಯಾ ಪೂರ್ಣಗೊಳಿಸಿಕೊಳ್ಳಲಿದೆ ಅಂತ ಪಾವೆಲ್ ಫೆಲ್ಗೆನ್ಹೌರ್ ಹೇಳಿದ್ದಾರೆ. ಇವರ ಭವಿಷ್ಯ ನಿಜವಾಗುತ್ತಾ, ಜಗತ್ತು ಮತ್ತೊಂದು ಮಹಾಯುದ್ಧವನ್ನ ನೋಡುತ್ತಾ ಅನ್ನೋದು ಕುತೂಹಲ ಕೆರಳಿಸಿದೆ. ಅಂದ್ಹಾಗೆ ಅಮೆರಿಕದ ಜೋ ಬೈಡೆನ್​ ಸರ್ಕಾರ ಈಗಾಗಲೇ ಉಕ್ರೇನ್​ಗೆ ಬೆಂಬಲ ನೀಡೋದಾಗಿ ಹೇಳಿದೆ. ಬ್ರಿಟನ್​​ ಕೂಡ ಬೆಂಬಲ ಸೂಚಿಸಿದ್ದು, ಇದ್ರ ಜೊತೆಗೆ ಅಮೆರಿಕದ ಮಿತ್ರ ರಾಷ್ಟ್ರಗಳು ಕೂಡ ಉಕ್ರೇನ್​ಗೆ ಬೆಂಬಲ ನೀಡಬಹುದು. ಅಂದ್ಹಾಗೆ 1991ರವರೆಗೆ ರಷ್ಯಾದ ಭಾಗವಾಗಿ ಸೋವಿಯತ್ ಯುನಿಯನ್​ನಲ್ಲಿದ್ದ ಉಕ್ರೇನ್ ಬಳಿಕ ಸ್ವತಂತ್ರ ದೇಶವಾಯ್ತು. ಉಕ್ರೇನ್​ ನಿಧಾನವಾಗಿ ರಷ್ಯಾದಿಂದ ಅಂತರ ಕಾಪಾಡಿಕೊಳ್ತಾ ಯುರೋಪಿನ ದೇಶಗಳಿಗೆ ಹತ್ತಿರವಾಯ್ತು. ಆದ್ರೆ 2014ರಲ್ಲಿ ಉಕ್ರೇನ್​ನಲ್ಲಿ ಕ್ರಾಂತಿ ನಡೆದು ರಷ್ಯಾ ಪರವಾಗಿದ್ದ ವಿಕ್ಟರ್ ಯಾನುಕೌವ್ಚ್​ ಅವರ ಸರ್ಕಾರವನ್ನ ಕೆಳಗಿಳಿಸಲಾಗುತ್ತೆ. ಆಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸೇನೆ​ ಉಕ್ರೇನ್​ನ ಕ್ರಿಮಿಯಾ ಮೇಲೆ ದಾಳಿ ಅದನ್ನ ವಶಪಡಿಸಿಕೊಳ್ಳುತ್ತೆ. ಅಲ್ಲಿಂದ ಇಲ್ಲಿವರೆಗೆ ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ನಡೀತಾನೇ ಇದೆ.

-masthmagaa.com

Contact Us for Advertisement

Leave a Reply