ಇಸ್ರೇಲ್‌, ಪ್ಯಾಲೆಸ್ತೇನ್‌ ನಡುವೆ ಐಸ್‌ ಕ್ರೀಮ್‌ ಯುದ್ದ!

masthmagaa.com:

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಯುದ್ಧ ಈಗ ಐಸ್​ಕ್ರೀಂಗೆ ಬಂದು ನಿಂತಿದೆ. ಬೆನ್ & ಜೆರ್ರಿ ಕಂಪನಿಯ ಐಸ್​ ಕ್ರೀಮನ್ನು ಆಕ್ರಮಿತ ಪ್ಯಾಲೆಸ್ತೇನ್​ ಪ್ರದೇಶದಲ್ಲಿ ಮಾರಾಟ ಮಾಡದಿರಲು ಸಂಸ್ಥೆ ನಿರ್ಧರಿಸಿದೆ. ಅಲ್ಲದೆ ಮುಂದಿನ ವರ್ಷದ ಅಂತ್ಯದ ವೇಳೆಗೆ ಐಸ್​ ಕ್ರೀಮ್ ಉತ್ಪಾದನೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಇಸ್ರೇಲ್ ಉತ್ಪಾದಕರ ಜೊತೆಗೆ ಮಾಡಿಕೊಂಡ ಒಪ್ಪಂದ ಅಂತ್ಯಗೊಳ್ಳಲಿದೆ. ಅದನ್ನ ನಾವು ರಿನೀವ್ ಮಾಡೋದಿಲ್ಲ ಅಂತ ಕೂಡ ಪ್ರಕಟಣೆಯಲ್ಲಿ ಯುನಿಲಿವರ್​​​ ಸಂಸ್ಥೆ ತಿಳಿಸಿದೆ. ಅಂದಹಾಗೆ ಈ ಐಸ್​ಕ್ರೀಂ ಕಂಪನಿ 1978ರಲ್ಲಿ ಅಮೆರಿಕದಲ್ಲಿ ಸ್ಥಾಪನೆಯಾಗಿತ್ತು. ಇದು ಸಮಾಜ ಸೇವೆಯಲ್ಲಿ ತುಂಬಾ ಹೆಸರು ಮಾಡಿರೋ ಒಂದು ಕಂಪನಿ.. ನಂತರದಲ್ಲಿ ಯುನೈಟೆಡ್ ಕಿಂಗ್ಡಮ್ ಮೂಲದ ಯುನಿಲಿವರ್ ಸಂಸ್ಥೆ ಬೆನ್ ಜೆರ್ರಿ ಐಸ್​ಕ್ರೀಂ ಕಂಪನಿಯನ್ನು ಖರೀದಿಸಿತ್ತು. ಇದು ಕೂಡ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿಕೊಂಡೇ ಬಂದಿದೆ. ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೇನ್​​ನಲ್ಲಿ ನಾವು ಐಸ್​ಕ್ರೀಂ ಮಾರೋದು ಅಸಮಂಜಸ ಅಂತ ನಮಗನ್ನಿಸುತ್ತೆ. ಹೀಗಾಗಿ ಇದ್ರಿಂದ ಹಿಂದೆ ಬರ್ತಿದ್ದೀವಿ ಅಂತ ಕಂಪನಿ ಹೇಳಿದೆ. ಆದ್ರೆ ಈ ನಿರ್ಧಾರ ಬದಲಿಸದೇ ಇದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಅಂತ ಇಸ್ರೇಲ್ ಪ್ರಧಾನಿ ನೆಫ್ತಾಲಿ ಬೆನ್ನೆಟ್ ಎಚ್ಚರಿಸಿದ್ದಾರೆ. ಅಂದಹಾಗೆ 1967ರಲ್ಲಿ ಮಿಡಲ್ ಈಸ್ಟ್​ ಯುದ್ಧದಲ್ಲಿ ಇಸ್ರೇಲ್ ಪ್ಯಾಲೆಸ್ತೇನ್​​ನ ವೆಸ್ಟ್ ಬ್ಯಾಂಕ್ ಭಾಗವನ್ನು ಆಕ್ರಮಿಸಿಕೊಂಡಿದೆ. ಇದಕ್ಕೆ ಅಂತಾರಾಷ್ಟ್ರೀಯ ಸಮುದಾಯದ ವಿರೋಧವಿದ್ದು, ಅಲ್ಲಿ ಆಗಾಗ ಹಿಂಸಾಚಾರ ಆಗ್ತಾನೇ ಇರುತ್ತೆ.‌

-masthmagaa.com

Contact Us for Advertisement

Leave a Reply