ಕೊರೋನಾ ಕಾಲದಲ್ಲಿ ಈ 10 ಶ್ರೀಮಂತರ ಆಸ್ತಿ 2 ಪಟ್ಟು ಜಾಸ್ತಿ!

masthmagaa.com:

ಕೊರೋನಾ ಶುರುವಾಗಿ 2 ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಜನ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಆದ್ರೆ ವಿಶ್ವದ 10 ಮಂದಿ ಶ್ರೀಮಂತ ಉದ್ಯಮಿಗಳ ಆಸ್ತಿ ಡಬಲ್ ಆಗಿದೆ ಅಂತ ಗೊತ್ತಾಗಿದೆ. ಚಾರಿಟಿ ಫೆಡರೇಷನ್ ಸಂಸ್ಥೆ ಆಕ್ಸ್​ಫಮ್​ ಪ್ರಕಾರ ಶ್ರೀಮಂತರ ಆಸ್ತಿ 70 ಸಾವಿರ ಕೋಟಿ ಡಾಲರ್​​ನಿಂದ ಒಂದೂವರೆ ಲಕ್ಷ ಕೋಟಿ ಡಾಲರ್​​ಗೆ ಏರಿಕೆಯಾಗಿದೆ ಅಂತ ಹೇಳಿದೆ. ಅಂದ್ರೆ ಪ್ರತಿದಿನ 130 ಕೋಟಿ ರೂಪಾಯಿ ಲೆಕ್ಕದಲ್ಲಿ ಇವರ ಆಸ್ತಿ ಏರಿಕೆಯಾಗಿದೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ನೋಡೋದಾದ್ರೆ 52.50 ಲಕ್ಷ ಕೋಟಿಯಿಂದ 111 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ 14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ವೇಗದಲ್ಲಿ ಇವರ ಆಸ್ತಿ ಏರಿಕೆಯಾಗಿದೆ ಅಂತ ಗೊತ್ತಾಗಿದೆ. ಈ ಅಸಮಾನತೆ ಆರ್ಥಿಕ ಹಿಂಸಾಚಾರದಂತಿದ್ದು, ಪ್ರತಿದಿನ ವಿಶ್ವದಲ್ಲಿ ಆರೋಗ್ಯ ಸೇವೆ ಸರಿಯಾಗಿ ಸಿಗದೇ, ಹಸಿವು, ಹವಾಮಾನ ಬದಲಾವಣೆಯಿಂದ 21 ಸಾವಿರ ಜನ ಸಾವನ್ನಪ್ತಿದ್ದಾರೆ. ಕೊರೋನಾ ಸುಮಾರು 16 ಕೋಟಿ ಜನರನ್ನು ಬಡತನದ ಸುಳಿಗೆ ತಳ್ಳಿದೆ. ಅಮೆರಿಕದ ಬ್ಯಸಿನೆಸ್ ಮ್ಯಾಗ್ಜೀನ್ ಫೋರ್ಬ್ಸ್​ ಅಂಕಿ ಅಂಶದ ಆಧಾರದಲ್ಲಿ ಈ ವರದಿ ಸಿದ್ಧಪಡಿಸಿದ್ದೀವಿ ಅಂತ ಆಕ್ಸ್​ಫಮ್​​​ ಸಂಸ್ಥೆ ತಿಳಿಸಿದೆ. ಅಂದಹಾಗೆ ಕಳೆದ ಬಾರಿಯ ಫೋರ್ಬ್ಸ್ ಪಟ್ಟಿಯಲ್ಲಿ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್, ಅಮೆಜಾನ್‌ನ ಜೆಫ್ ಬೆಜೋಸ್, ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್, ಮಾಜಿ ಮೈಕ್ರೋಸಾಫ್ಟ್ ಸಿಇಒ ಬಿಲ್ ಗೇಟ್ಸ್ ಮತ್ತು ಸ್ಟೀವ್ ಬಾಲ್ಮರ್, ಮಾಜಿ ಒರಾಕಲ್ ಸಿಇಒ ಲ್ಯಾರಿ ಎಲಿಸನ್, ಅಮೆರಿಕದ ಹೂಡಿಕೆದಾರ ವಾರೆನ್ ಬಫೆಟ್ ಮತ್ತು ಫ್ರೆಂಚ್ ಐಷಾರಾಮಿ ಗುಂಪಾದ LVMH ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್ ಟಾಪ್ 10 ಶ್ರೀಮಂತರ ಪಟ್ಟಿಯನ್ನು ಅಲಂಕರಿಸಿದ್ರು.

-masthmagaa.com

Contact Us for Advertisement

Leave a Reply