ಎಂಟು ಮಂದಿ ಆಸ್ತಿ 72 ಲಕ್ಷ ಕೋಟಿ ರುಪಾಯಿ!

masthmagaa.com:

ಭಾರತದಲ್ಲಿ ಆರ್ಥಿಕ ಅಸಮಾನತೆ ಇದೆ. ಸಂಪತ್ತು ಸಮಾನವಾಗಿ ಹಂಚಿಕೆಯಾಗಿಲ್ಲ ಅಂತ ನಾವು ಹೇಳ್ತೀವಿ.. ಆದ್ರೆ ಅದು ಭಾರತದಲ್ಲಿ ಮಾತ್ರ ಅಲ್ಲ.. ಇಡೀ ಪ್ರಪಂಚದಲ್ಲೇ ಹಾಗಿದೆ.. ಪ್ರಪಂಚದ ಟಾಪ್ 8 ಮಂದಿ ಶ್ರೀಮಂತರ ಬಳಿ 1 ಟ್ರಿಲಿಯನ್ ಡಾಲರ್ ದುಡ್ಡಿದೆ.. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ನೋಡೋದಾದ್ರೆ 72 ಲಕ್ಷ ಕೋಟಿ ರೂಪಾಯಿ.. ಈ 8 ಮಂದಿಯ ಆಸ್ತಿಯಲ್ಲಿ ಈ ವರ್ಷ ಅಂದ್ರೆ 2021ರಲ್ಲಿ 110 ಬಿಲಿಯನ್ ಡಾಲರ್ ಏರಿಕೆಯಾಗಿದೆ ಅಂತ ಬ್ಲೂಂಬರ್ಗ್​​ ಬಿಲಿಯನೇರ್ ಇಂಡೆಕ್ಸ್​​​​​ನಿಂದ ತಿಳಿದು ಬಂದಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇದ್ದು, 196 ಬಿಲಿಯನ್ ಡಾಲರ್ ಹೊಂದಿದ್ದಾರೆ. 2ನೇ ಸ್ಥಾನದಲ್ಲಿರೋ ಎಲಾನ್ ಮಸ್ಕ್​ ಬಳಿ 174.8 ಬಿಲಿಯನ್ ಡಾಲರ್ ಆಸ್ತಿ ಇದೆ. ಬಿಲ್ ಗೇಟ್ಸ್ ಬಳಿ 144.6 ಬಿಲಿಯನ್ ಡಾಲರ್, ಬೆರ್ನಾರ್ಡ್​ ಅರ್ನಾಲ್ಟ್​ ಬಳಿ 131.8 ಬಿಲಿಯನ್ ಡಾಲರ್ ದುಡ್ಡಿದೆ. ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಝುಕರ್​​​ಬರ್ಗ್​ ಬಳಿ 118.1 ಬಿಲಿಯನ್ ಡಾಲರ್​, ಗೂಗಲ್ ಮಾಲೀಕ ಲ್ಯಾರಿ ಪೇಜ್ ಬಳಿ 103.6 ಬಿಲಿಯನ್ ಡಾಲರ್​, ವಾರನ್ ಬಫೆಟ್ ಬಳಿ 100.7 ಬಿಲಿಯನ್ ಮತ್ತು ಸೆರ್ಜೀ ಬ್ರಿನ್ ಬಳಿ 100.2 ಬಿಲಿಯನ್ ಡಾಲರ್ ಆಸ್ತಿ ಇದೆ.

-masthmagaa.com

Contact Us for Advertisement

Leave a Reply