ಜಗತ್ತಿನ ಅತಿ ಉದ್ದದ ಪಾದಚಾರಿ ತೂಗು ಸೇತುವೆ ಇದೇ ನೋಡಿ..

masthmagaa.com:

ಜಗತ್ತಿನ ಅತಿ ಉದ್ದದ ಪಾದಚಾರಿ ತೂಗು ಸೇತುವೆ ಪೋರ್ಚುಗಲ್​​ನಲ್ಲಿ ನಿರ್ಮಾಣವಾಗಿದೆ. ಈ ತೂಗು ಸೇತುವೆ 1,700 ಅಡಿ ಉದ್ದವಿದ್ದು, 574 ಅಡಿ ಎತ್ತರದಲ್ಲಿದೆ. ಇದರ ಕೆಳಗೆ ಪೈವಾ ನದಿ ಹರೀತಿದೆ. ಇದು ಪೋರ್ಚುಗಲ್​​ನ ಅರೌಕಾ ಪಟ್ಟಣದಲ್ಲಿದೆ. ಇದು 516 ಮೀಟರ್ ಉದ್ದ ಇರೋದ್ರಿಂದ ಇದನ್ನ ಅರೌಕಾ 516 ಅಂತಾನೂ ಕರೀತಾರೆ. ಈ ತೂಗು ಸೇತುವೆಗೂ ಮೊದಲು ಸ್ವಿಜರ್​ಲ್ಯಾಂಡ್​ನ ರಾಂಡಾದಲ್ಲಿದ್ದ ಚಾರ್ಲ್ಸ್​ ಕೌನೇನ್​ ಬ್ರಿಜ್ ಜಗತ್ತಿನ ಅತಿ ಉದ್ದದ ಪಾದಚಾರಿ ತೂಗು ಸೇತುವೆ ಎನಿಸಿಕೊಂಡಿತ್ತು. ಅದು 494 ಮೀಟರ್ ಅಥವಾ 1,620 ಅಡಿ ಉದ್ದವಿತ್ತು.

-masthmagaa.com

Contact Us for Advertisement

Leave a Reply