WFIನ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಸಿಂಗ್‌ ನಾರ್ಕೋ ಪರೀಕ್ಷೆಗೆ ಒಳಪಡಲಿ: ಸಾಕ್ಷಿ ಮಲೀಕ್‌

masthmagaa.com:

WFIನ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಿಸಿ ಕುಸ್ತಪಟುಗಳು ಅನೇಕ ದಿನಗಳಿಂದ ಪ್ರತಿಭಟನೆ ಮಾಡ್ತಿದಾರೆ. ಇದೀಗ ಬ್ರಿಜ್‌ ಭೂಷಣ್‌ ಸಿಂಗ್‌ರನ್ನ ನಾರ್ಕೋ ಪರೀಕ್ಷೆಗೆ ಒಳಗಾಗುವಂತೆ ಕುಸ್ತಿಪಟುಗಳು ಸವಾಲು ಹಾಕಿದ್ದಾರೆ. ನೀವು ತಪಿತಸ್ಥರಲ್ಲ ಅಂತ ನಿಮಗೆ ವಿಶ್ವಾಸವಿದ್ರೆ, ನಾರ್ಕೋ ಪರೀಕ್ಷೆಗೆ ಒಳಪಡಿ ಅಂತ ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲೀಕ್‌ ಸವಾಲ್‌ ಹಾಕಿದ್ದಾರೆ. ಇತ್ತ ಆರೋಪಗಳನ್ನ ತಳ್ಳಿ ಹಾಕ್ತಾ ಬಂದಿರೊ ಬ್ರಿಜ್‌ ಭೂಷಣ್‌, ತಮ್ಮ ಮೇಲಿನ ಒಂದೇ ಒಂದು ಆರೋಪ ಸಾಬೀತಾದ್ರೂ ನೇಣು ಹಾಕಿಕೊಳ್ತೇನೆ ಎಂದಿದ್ರು.

-masthmagaa.com

Contact Us for Advertisement

Leave a Reply