ವೃದ್ಧಿಮಾನ್ ಸಾಹಾ ಜಗತ್ತಿನ ಶ್ರೇಷ್ಠ ವಿಕೆಟ್ ಕೀಪರ್: ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವೃದ್ಧಿಮಾನ್ ಸಾಹಾ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವೃಷಭ್ ಪಂಥ್ ಜಾಗವನ್ನು ವೃದ್ಧಿ ಮಾನ್ ಸಾಹಾ ತುಂಬಲಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಂಗಾಳಿ ಕ್ರಿಕೆಟ್ ಆಟಗಾರ ವೃದ್ಧಿಮಾನ್ ಸಾಹಾ ಜಗತ್ತಿನ ಶ್ರೇಷ್ಠ ವಿಕೆಟ್ ಕೀಪರ್ ಎಂದು ಕೊಹ್ಲಿ ಹಾಡಿ ಹೊಗಳಿದ್ದಾರೆ. ಗಾಯದ ಸಮಸ್ಯೆಯಿಂದ ತುಂಬಾ ಟೈಂ ತಂಡದಿಂದ ಹೊರಗೆ ಉಳಿದಿದ್ದ ಸಾಹಾ, ವೆಸ್ಟ್ ಇಂಡೀಸ್ ಟೂರ್ ವೇಳೆ ತಂಡಕ್ಕೆ ವಾಪಸ್ ಆಗಿದ್ದರು. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲೂ ಆಟವಾಡಲಿದ್ದಾರೆ. ನಾಳೆಯಿಂದ ವಿಶಾಖಪಟ್ಟಣಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

Contact Us for Advertisement

Leave a Reply