ಅಮೆರಿಕ-ಚೀನಾ ಫ್ರೆಂಡ್ಶಿಪ್​​ನಲ್ಲೇ ಕೊರೋನಾ ಬಿಡುಗಡೆ!

masthmagaa.com:

ಕೊರೋನಾ ವೈರಾಣು ಲೀಕ್ ಆಗಿದ್ದು ವುಹಾನ್ ಲ್ಯಾಬ್​ನಿಂದ ಅನ್ನೋ ಆರೋಪದ ನಡುವೆಯೇ ಶಾಕಿಂಗ್ ಅಂಶವೊಂದು ಬಯಲಾಗಿದೆ. ಈ ವರದಿ ನೋಡಿದ ಬಳಿಕ ಕೊರೋನಾ ಬಿಟ್ಟಿದ್ದೇ ಚೀನಾ ಅಂತ ಕೂಗಾಡ್ತಿರೋ ಅಮೆರಿಕದ ಮೇಲೂ ಸಾಕಷ್ಟು ಸವಾಲು ಎದುರಾಗುತ್ತೆ. ಚೀನಾದಿಂದ ಲೀಕ್ ಆಗಿದ್ದು ಅಂತ ದಿನಕ್ಕೊಂದು ಹೇಳಿಕೆ ಬಿಡುಗಡೆ ಮಾಡ್ತಿರೋ ಅಮೆರಿಕದ ಸಾಂಕ್ರಾಮಿಕ ರೋಗಗಳ ತಜ್ಞ ಅಂಥೋಣಿ ಫೌಚಿ ಕೂಡ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗುತ್ತೆ. ಯಾಕಂದ್ರೆ ಅಮೆರಿಕದ ಇಕೋ ಹೆಲ್ತ್ ಅಲಾಯನ್ಸ್ ಅನ್ನೋ ಸಂಸ್ಥೆಯ ಮುಖ್ಯಸ್ಥ ಪೀಟರ್ ಡಜೆಕ್​ರ ಅಂಥದ್ದೊಂದು ಶಾಕಿಂಗ್ ಸ್ಟೇಟ್ಮೆಂಟ್ ಬಯಲಾಗಿದೆ. 2016ರಲ್ಲಿ ಮಾತನಾಡಿದ್ದ ಪೀಟರ್ ಡಜೆಕ್​​​​​, ನಾವು ಚೀನಾದ ಲ್ಯಾಬ್​​ನಲ್ಲಿ ಸೆಲ್ಸ್​​​ಗೆ ಅಟ್ಯಾಚ್ ಆಗೋ ಸ್ಪೈಕ್ ಪ್ರೊಟೀನ್ ಸೀಕ್ವೆನ್ಸ್ ಮಾಡಿದ್ವಿ. ನಂತರ ಬಾವಲಿಗಳಲ್ಲಿ ಸಿಕ್ಕ ಕೊರೋನಾದ ಸ್ಪೈಕ್​​ಗಳನ್ನು ಬದಲಾವಣೆ ಮಾಡಲಾಯ್ತು. ಅಂದ್ರೆ ವೈರಸ್​​ನ ಸ್ಪೈಕ್​​ಗಳು ಮನುಷ್ಯರ ಜೀವಕೋಶಗಳಿಗೆ ಅಟ್ಯಾಚ್ ಆಗೋಹಾಗೆ ಮಾಡಿದ್ವಿ. ಮಾಡಿದ್ವಿ ಅಂದ್ರೆ ನಾನು ಮಾಡಿದ್ದಲ್ಲ.. ಚೀನಾ ಲ್ಯಾಬ್​​ನಲ್ಲಿರೋ ನನ್ನ ಸಹೋದ್ಯೋಗಿಗಳು ಮಾಡಿದ್ರು. ಇದು ಮನುಷ್ಯರಿಗೆ ತುಂಬಾ ಅಪಾಯಕಾರಿಯಾಗಲಿದೆ ಅಂತ ಹೇಳಿಕೆ ಕೊಟ್ಟಿದ್ರು. ಇದೇ ಹೇಳಿಕೆ ಈಗ ಚೀನಾ ಕಡೆಗೆ ಬೊಟ್ಟು ಮಾಡ್ತಿರೋ ಅಮೆರಿಕ ಬುಡಕ್ಕೇ ಬೆಂಕಿ ಬೀಳುವಂತೆ. ಅಂದಹಾಗೆ ಚೀನಾದ ಲ್ಯಾಬ್​​​ನಲ್ಲಿ ಕೊರೋನಾ ಸೃಷ್ಟಿಯಾಗಲು ಅಮೆರಿಕದ ಪಾತ್ರ ಕೂಡ ಇದೆ ಅನ್ನೋ ವಾದ ಇದೆ. ಅಲ್ಲದೆ ಅಮೆರಿಕ ಚೀನಾದ ಲ್ಯಾಬ್​​​ಗೆ ಅನುದಾನ ಕೂಡ ನೀಡ್ತಿದೆ ಅಂತ ಈ ಹಿಂದೆಯೇ ಸುದ್ದಿಯಾಗಿತ್ತು. ಆದ್ರೀಗ ಅದ್ರ ಬೆನ್ನಿಗೆ ಪೀಟರ್ ಡಜೆಕ್​​ರ 2016ರ ಬಾಂಬ್ ಈಗ ಸ್ಫೋಟಗೊಂಡಿದೆ. ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ ಪೀಟರ್ ಡಜೆಕ್​​​ರ ಇಕೋ ಹೆಲ್ತ್ ಅಲಾಯನ್ಸ್ ಬೇರೆ ಯಾವುದೂ ಅಲ್ಲ.. ವುಹಾನ್ ಲ್ಯಾಬ್​​​ಗೆ ಅಮೆರಿಕ ಅನುದಾನ ನೀಡಿದ್ದು ಇದೇ ಸಂಸ್ಥೆಯ ಮೂಲಕ.. 2014ರಿಂದ 2019ರವರೆಗೆ National Institute of Allergy and Infectious Diseasesನಿಂದ ಸುಮಾರು 6 ಲಕ್ಷ ಡಾಲರ್​​​ನಷ್ಟು ದುಡ್ಡು ನೀಡಲಾಗಿತ್ತು. ಅಂದಹಾಗೆ ಆಗ ಈ National Institute of Allergy and Infectious Diseasesನ ಅಧ್ಯಕ್ಷರಾಗಿದ್ದು ಬೇರೆ ಯಾರೂ ಅಲ್ಲ. ಈಗ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ರ ಚೀಫ್ ಮೆಡಿಕಲ್ ಆಫೀಸರ್ ಆಗಿದ್ದಾರಲ್ವಾ ಅಂಥೋಣಿ ಫೌಚಿ ಅವರೇ ಆಗಿದ್ರು. ಆದ್ರೆ 2020ರ ಏಪ್ರಿಲ್​​ನಲ್ಲಿ ಕೊರೋನಾ ಲ್ಯಾಬ್​​ನಿಂದ ಲೀಕ್ ಥಿಯರಿಯನ್ನು ಇದೇ ಅಂಥೋಣಿ ಫೌಚಿ ಅಲ್ಲಗಳೆದಿದ್ರು. ಇದ್ರ ಬೆನ್ನಲ್ಲೇ ಈ ಪೀಟರ್ ಡಜೆಕ್​ ಕೂಡ ಅಂಥೋಣಿ ಪೌಚಿಗೆ ಇ ಮೇಲ್ ಮಾಡಿ ಥ್ಯಾಂಕ್ಸ್​ ಹೇಳಿದ್ರು. ಅಲ್ಲದೆ ಪೀಟರ್​​​​​​​​​ ಡಜೆಕ್​​​​ ಲ್ಯಾನ್ಸೆಟ್ ಜರ್ನಲ್​​​​ಗೆ 20ಕ್ಕೂ ಹೆಚ್ಚು ವಿಜ್ಞಾನಿಗಳ ಸಹಿ ಇರೋ ಲೆಟರ್ ಕಳುಹಿಸಿ, ಈ ಥಿಯರಿ ಕೈಬಿಡುವಂತೆ ಒತ್ತಡ ಕೂಡ ಹೇರಿದ್ರು.

-masthmagaa.com

Contact Us for Advertisement

Leave a Reply