ಜಗತ್ತಿಗೆ ಬಾಸ್​ ರೀತಿ ಅಮೆರಿಕ ವರ್ತಿಸಬಾರದು: ಜಿನ್​ಪಿಂಗ್ ವಾರ್ನಿಂಗ್

masthmagaa.com:

ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಜಗತ್ತಿನ ಇತರ ರಾಷ್ಟ್ರಗಳಿಗೆ ಬಾಸ್​ ರೀತಿ ವರ್ತಿಸೋದನ್ನ ನಿಲ್ಲಿಸಬೇಕು ಅಂತ ಚೀನಾ ಅಧ್ಯಕ್ಷ ಜಿನ್​​ಪಿಂಗ್ ಹೇಳಿದ್ದಾರೆ. ಅಮೆರಿಕ ಮತ್ತು ಚೀನಾ ನಡುವೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿರೋ ನಡುವೆಯೇ ಚೀನಾ ಅಧ್ಯಕ್ಷರ ಕಡೆಯಿಂದ ಈ ಮಾತು ಹೊರಬಿದ್ದಿದೆ. ಬೋಆವೋ ಫಾರಂ ಫಾರ್ ಏಷ್ಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವೊಂದು ದೇಶಗಳು ಅಡೆತಡೆಗಳನ್ನ ನಿರ್ಮಿಸುತ್ತಿದ್ದಾರೆ, ಕೆಲವೊಂದು ದೇಶಗಳನ್ನ ಪ್ರತ್ಯೇಕವಾಗಿ ಇಡಲು ಪ್ರಯತ್ನಿಸುತ್ತಿವೆ. ಇದರಿಂದ ಬೇರೆ ದೇಶಗಳಿಗೆ ಸಮಸ್ಯೆಯಾಗುತ್ತೆ. ಆದ್ರೆ ಯಾರಿಗೂ ಲಾಭ ಆಗೋದಿಲ್ಲ ಅಂತ ಹೇಳಿದ್ದಾರೆ. ಈ ಜಗತ್ತು ನ್ಯಾಯವನ್ನ ಬಯಸುತ್ತೆ, ಪ್ರಾಬಲ್ಯವನ್ನ ಅಲ್ಲ. ದೊಡ್ಡ ದೇಶವನ್ನ ದೊಡ್ಡ ದೇಶದ ರೀತಿಯಲ್ಲೇ ನೋಡಬೇಕು ಅಂತೆಲ್ಲಾ ಹೇಳಿದ್ದಾರೆ. ಮೊನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ವಾಷಿಂಗ್ಟನ್​ ಡಿಸಿಯಲ್ಲಿ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಮಾತುಕತೆಯು ಹಾಂಗ್​ಕಾಂಗ್​, ತೈವಾನ್​, ಉಘರ್​ ಮುಸ್ಲಿಮರು, ದಕ್ಷಿಣ ಚೀನಾ ಸಮುದ್ರದ ವಿಚಾರ.. ಹೀಗೆ ಚೀನಾ ಕೇಂದ್ರೀಕೃತವೇ ಆಗಿತ್ತು. ಇದರಿಂದ ಉರ್ಕೊಂಡಿರೋ ಚೀನಾ ಅಧ್ಯಕ್ಷ ಜಿನ್​ಪಿಂಗ್​ ಈ ರೀತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply