ರಷ್ಯಾ ಜೊತೆ ಸೇರಿ ಜಾಗತಿಕ ಮಹಾಶಕ್ತಿಯಾಗೋಕೆ ಸಿದ್ದ! ಜಿನ್‌ ಪಿಂಗ್‌ ಶಪಥ!

masthmagaa.com:

ಯುಕ್ರೇನ್‌ ಸಂಘರ್ಷದ ನಂತರ ಇದೇ ಮೊದಲ ಬಾರಿಗೆ ರಷ್ಯಾ ಹಾಗೂ ಚೀನಾ ನಾಯಕರು ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪುಟಿನ್‌ ಹಾಗೂ ಜಿನ್‌ಪಿಂಗ್‌ ಇಬ್ರೂ ಮಾಸ್ಕ್‌ ಹಾಕಿರಲಿಲ್ಲ. ಅದ್ರಲ್ಲೂ ಚೀನಾ ಅಧ್ಯಕ್ಷ ಮಾಸ್ಕ್‌ ಹಾಕಿರಲಿಲ್ಲ ಅನ್ನೋದು ತುಂಬಾ ಇಂಟ್ರಸ್ಟಿಂಗ್‌ ವಿಚಾರ. ಯಾಕಂದ್ರೆ ಜಗತ್ತಲ್ಲಿ ಕೊರೊನಾ ಕಡಿಮೆಯಾಗ್ತಿದ್ರೂ ಈಗಲೂ ಕೂಡ ಚೀನಾದಲ್ಲಿ ಲಾಕ್‌ಡೌನ್‌ ಇದೆ. ಈ ಹೊತ್ತಲ್ಲೇ ಚೀನಾ ಅಧ್ಯಕ್ಷರೇ ಮಾಸ್ಕ್‌ ಹಾಕಿಲ್ಲ. ಅದೂ ಬೇರೆ ದೇಶಕ್ಕೆ ಬಂದಿದ್ರೂ ಕೂಡ. ಇನ್ನು ಇಬ್ಬರೂ ನಾಯಕರೂ ಉಭಯ ದೇಶಗಳ ಪರಸ್ಪರ ಸಹಕಾರ ಕ್ಷೇತ್ರಗಳ ಬಗ್ಗೆ, ಜಾಗತಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಜಿನ್‌ ಪಿಂಗ್‌, ರಷ್ಯಾ ಜೊತೆಗೆ ಸೇರ್ಕೊಂಡು ನಾವು ಜಗತ್ತಿನಲ್ಲಿ ಮಹಾಶಕ್ತಿಯಾಗಿ ಕೆಲಸ ಮಾಡೋಕೆ ಸಿದ್ದವಿದ್ದೀವಿ ಅಂತ ಹೇಳಿದ್ದಾರೆ. ಜೊತೆಗೆ ಸಾಮಾಜಿಕ ಪ್ರಕ್ಷುಬ್ಧತೆಯಿಂದ ತತ್ತರಿಸಿರುವ ಈ ಜಗತ್ತಿನಲ್ಲಿ ಸ್ಥಿರತೆ ಮತ್ತು ಸಕಾರಾತ್ಮಕ ಶಕ್ತಿಯ ಸ್ಥಾನವನ್ನ ತುಂಬಲು, ಮಾರ್ಗದರ್ಶಕರ ಪಾತ್ರವನ್ನು ವಹಿಸಲು ನಾವು ರೆಡಿ ಇದ್ದೇವೆ ಅಂತ ಹೇಳಿದ್ದಾರೆ. ಇನ್ನ ಪುಟಿನ್‌ ಪ್ರತಿಕ್ರಿಯಿಸಿ ʻಯುಕ್ರೇನ್‌ ಕುರಿತು ಚೀನಾ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ. ನಮಗದು ಅರ್ಥ ಆಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply