ಚೀನಾ-ತೈವಾನ್‌ ಮತ್ತೇ ಒಂದಾಗ್ಬೇಕು: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌

masthmagaa.com:

ಚೀನಾ ಮತ್ತು ತೈವಾನ್‌ ಮತ್ತೆ ಒಂದಾಗ್ಬೇಕು, ಇದನ್ನ ತಡೆಯೋಕೆ ಸಾಧ್ಯವಿಲ್ಲ ಅಂತ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿಕೆ ನೀಡಿದ್ದಾರೆ. ಹೊಸ ವರ್ಷದಂದು ಚೀನಾವನ್ನ ಉದ್ದೇಶಿಸಿ ಮಾತನಾಡಿದ ಜಿನ್‌ಪಿಂಗ್‌ ಈ ರೀತಿ ಹೇಳಿದ್ದಾರೆ. ಇನ್ನು ʻತೈವಾನ್‌ ಜಲಸಂಧಿಯ ಎರಡೂ ಬದಿಯಲ್ಲಿರೋ ಚೀನಿ ಜನರು ಒಂದೇ ರೀತಿಯ ಉದ್ದೇಶವನ್ನ ಹೊಂದಿರ್ಬೇಕು. ಹಾಗೂ ಚೀನಾ ರಾಷ್ಟ್ರಕ್ಕೆ ಜೀವ ಕಳೆಯನ್ನ ತುಂಬೋಕೆ ಮತ್ತೊಮ್ಮೆ ಒಂದಾಗ್ಬೇಕು. ನಮ್ಮ ತಾಯ್ನಾಡು ಮತ್ತೆ ಒಂದಾಗೇ ಆಗುತ್ತೆʼ ಅಂತ ಹೇಳಿದ್ದಾರೆ. ಅಂದ್ಹಾಗೆ ಚೀನಾ ತೈವಾನ್‌ ಒಂದಾಗೋ ವಿಚಾರವಾಗಿ ಜಿನ್‌ಪಿಂಗ್‌ ಇದು ಎರಡನೇ ಬಾರಿ ಮಾತನಾಡಿರೋದು. ಕಳೆದ ವರ್ಷ ಈ ಕುರಿತು ಮಾತನಾಡಿದ ಅವ್ರು, ʻತೈವಾನ್‌ ಜಲಸಂಧಿಯ ಎರಡು ಬದಿಯಲ್ಲಿರೋ ಚೀನಿ ಜನರು ಒಂದೇ ಕುಟುಂಬದವ್ರುʼ ಅಂತ ಹೇಳಿದ್ರು. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ತೈವಾನ್‌ ಅಧ್ಯಕ್ಷೆ ತ್ಸೈ ಇಂಗ್‌-ವೆನ್‌, ʻಜನರ ಇಚ್ಛೆಯಿಂದಲೇ ತೈವಾನ್‌ ಮತ್ತು ಚೀನಾ ನಡುವಿನ ಸಂಬಂಧವನ್ನ ಡಿಸೈಡ್‌ ಮಾಡ್ಬೋದು. ಜೊತೆಗೆ ಗೌರವದ ಆಧಾರದ ಮೇಲೆ ಶಾಂತಿ ನೆಲೆಸ್ಬೇಕುʼ ಅಂತ ಹೇಳಿದ್ದಾರೆ. ಇನ್ನು ಮುಂಬರೋ ಜನವರಿ 13 ರಂದು ತೈವಾನ್‌ನಲ್ಲಿ ಅಧ್ಯಕ್ಷೀಯ ಮತ್ತು ಸಂಸದೀಯ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇದೀಗ ಚೀನಾ ಪುನಃ ತೈವಾನ್‌ ಜೊತೆ ಮತ್ತೇ ಒಂದಾಗೋ ಮಾತು ಕೇಳಿಬರ್ತಿವೆ.

-masthmagaa.com

Contact Us for Advertisement

Leave a Reply