ಸೇನಾ ಸಿದ್ದತೆಗೆ ಚೀನಾ ಸರ್ವಾಧಿಕಾರಿ ಆದೇಶ! ಜಿನ್‌ಪಿಂಗ್‌ ಪ್ಲ್ಯಾನ್‌ ಏನು?

masthmagaa.com:

ಚೀನಾ-ಪಾಕ್‌ ಇಬ್ರೂ ಸೇರ್ಕೊಂಡು ಬಯೋ ವೆಪನ್‌ ಅಥ್ವಾ ಜೈವಿಕ ಶಸ್ತ್ರಾಸ್ತ್ರವನ್ನ ತಯಾರಿ ಮಾಡ್ತಿವೆ ಅನ್ನೋ ಸುದ್ದಿಗಳು ಕೇಳಿ ಬಂದಿರೋ ಹೊತ್ತಲ್ಲೇ ಇದೀಗ ಚೀನಾದಿಂದ ಮತ್ತೊಂದು ಮಹತ್ವದ ವಿಚಾರ ಹೊರಬಿದ್ದಿದೆ. ಚೀನಾ ಅಧ್ಯಕ್ಷ ಶಿ ಜಿನ್‌ ಪಿಂಗ್ ತಮ್ಮ ಸೇನೆಗೆ ಯುದ್ದಕ್ಕೆ ತಯಾರಿಮಾಡಿಕೊಳ್ಳಿ ಅಂತ ಆದೇಶ ನೀಡಿದ್ದಾರೆ ಅಂತ ವರದಿಯಾಗಿದೆ. ಸೇನೆಗೆ ಅಗತ್ಯವಾದ ತಯಾರಿ ಮೇಲೆ ಫೋಕಸ್‌ ಮಾಡಿ ಅಂತ ಚೀನಾ ಸರ್ವಾಧಿಕಾರಿ ಜಿನ್‌ಪಿಂಗ್‌ ಹೇಳಿದ್ದಾರೆ. ಪೀಪಲ್ಸ್‌ ಲಿಬರೇಶನ್‌ ಆರ್ಮಿ ಅಥವಾ ಚೀನಾ ಸೇನೆಯ ಯುನಿಫಾರ್ಮ್‌ನಲ್ಲಿ ಜಿನ್‌ಪಿಂಗ್‌ ಕಾಣಿಸಿಕೊಂಡಿರೋ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಸೇನಾ ಕಮಾಂಡ್‌ನ್ನ ಮೀಟ್‌ ಮಾಡಿದ ಸಂದರ್ಭದಲ್ಲಿ, ʻನಿಮ್ಮ ಶಕ್ತಿಯನ್ನ ಫೈಟಿಂಗ್‌ ಮೇಲೆ ಫೋಕಸ್‌ ಮಾಡಿ. ಗೆಲ್ಲೋ ಸಾಮರ್ಥ್ಯವನ್ನ ಹೆಚ್ಚಿಸೋದಕ್ಕೆ ಹಾರ್ಡ್‌ವರ್ಕ್‌ ಮಾಡಿʼ ಅಂತ ಜಿನ್‌ಪಿಂಗ್‌ ಹೇಳಿದ್ದಾರೆ. ಜೊತೆಗೆ ಅಸ್ಥಿರತೆ ಹೊಂದಿರೊ ಚೀನಾದ ಸಮಗ್ರತೆ ಹಾಗೂ ರಾಷ್ಟ್ರೀಯ ಭದ್ರತೆಯನ್ನ ರಕ್ಷಿಸಬೇಕು ಅಂತಾನೂ ಸೇನೆಗೆ ಆದೇಶಿಸಿದ್ದಾರೆ. ಅಂದಹಾಗೆ ಈ ರೀತಿ ಸೇನೆಗೆ ಜಿನ್‌ಪಿಂಗ್‌ 2013ರಲ್ಲಿಯೂ ಆದೇಶ ಕೊಟ್ಟಿದ್ರು. ಅಂದ್ರೆ ತಾವು ಅಧಿಕಾರಕ್ಕೆ ಬಂದ ಬೆನ್ನಲ್ಲೇ ಯುದ್ದ ಸಿದ್ದತೆಗೆ ಹೇಳಿದ್ರು. ಅದಾದ ಬಳಿಕ 2017ರಲ್ಲಿಯೂ ಇದೇ ರೀತಿ ಸೂಚನೆ ನೀಡಿದ್ರು. ಆದ್ರೆ ಆ ಟೈಂನಲ್ಲಿ ಯಾರಿಗೂ ಅದು ತಲೆಕಡಿಸೋ ವಿಚಾರ ಆಗಿರಲಿಲ್ಲ. ಆದ್ರೆ ತೈವಾನ್‌ ವಿಚಾರದಲ್ಲಿ ಅಮೆರಿಕ ಮತ್ತು ಚೀನಾ ಒಬ್ಬರಿಗೊಬ್ಬರು ಯುದ್ದ ಮಾಡ್ತೀವಿ ಅಂತ ಮಾತನಾಡೋ ಹೊತ್ತಲ್ಲೇ ಚೀನಾದ ಈ ಆದೇಶ ಹಲವು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಇತ್ತೀಚೆಗೆ ನಡೆದ ಕಮ್ಯುನಿಸ್ಟ್‌ ಪಕ್ಷದ 20 ನೇ ಪಂಚವಾರ್ಷಿಕ ಸಭೆಯಲ್ಲೂ ಅಮೆರಿಕ ಮೇಲೆ ಇನ್‌ಡೈರೆಕ್ಟ್‌ ಆಗಿ ವಾಗ್ದಾಳಿ ಮಾಡಿದ್ದ ಜಿನ್‌ಪಿಂಗ್‌ ತೈವಾನ್‌ ವಿಚಾರದಲ್ಲಿ ತಮ್ಮ ನಿಲುವೇನು ಅನ್ನೋದನ್ನ ಸ್ಪಷ್ಟಪಡಿಸಿದ್ರು. ತೈವಾನ್‌ನ್ನ ಸೇರಿಸಿಕೊಳ್ಳೋಕೆ ನಾವು ಸೇನೆ ಬಳಸೋಕೆ ಹಿಂದೆ ಸರಿಯಿಲ್ಲ ಅಂತ ಹೇಳಿದ್ರು. ಇದೆಲ್ಲಾ ಅಮೆರಿಕ ಹಾಗೂ ತೈವಾನ್‌ ಇಬ್ಬರ ಕೆಂಗಣ್ಣಿಗೆ ಗುರಿಯಾಗಿತ್ತು. ಚೀನಾ ಮತ್ತು ತೈವಾನ್‌ ನಡುವೆ ಬೂದಿ ಮುಚ್ಚಿದ ಪರಿಸ್ಥಿತಿ ಇನ್ನೂ ಇದೆ. ಇಷ್ಟೆಲ್ಲಾ ಭೀತಿ, ಆತಂಕ ಇದ್ರೂ ಮತ್ತೆ ಯುದ್ದ ಸಿದ್ದತೆಗೆ ಚೀನಾ ಆದೇಶ ಕೊಟ್ಟಿದೆ. ಇನ್ನು ಇತ್ತ ಚೀನಾದಲ್ಲಿ ಕೊರೊನಾ ಕೂಡ ಭುಗಿಲೆದ್ದಿದೆ. ಚೀನಾ ಜೀರೊ ಕೋವಿಡ್‌ ಪಾಲಿಸಿ ಅಂತ ಎಷ್ಟೆಲ್ಲಾ ನಿಯಮಗಳನ್ನ ತಂದ್ರೂ ಕೊರೊನಾ ಕೇಸ್‌ಗಳು ಕಡಿಮೆಯಾಗಿಲ್ಲ. ಅಲ್ಲಿನ ನಗರಗಳನ್ನ ಲಾಕ್‌ಡೌನ್‌ ಮಾಡೋದು ನಿಂತಿಲ್ಲ. ಇದೀಗ 50 ಲಕ್ಷ ಜನಸಂಖ್ಯೆ ಹೊಂದಿರೊ ಅಲ್ಲಿನ ಆರ್ಥಿಕತೆಯ ಹಬ್‌ ಅಂತಾನೇ ಕರೆಸಿಕೊಂಡಿರೋ ಗುವಾಂಗ್ಜೋ (Guangzhou) ನಗರವನ್ನ ಲಾಕ್‌ಡೌನ್ ಮಾಡಲಾಗಿದೆ.

-masthmagaa.com

Contact Us for Advertisement

Leave a Reply