ಯಾದಗಿರಿಯಲ್ಲಿ ಯುವಕನ ಹತ್ಯೆ: ಪೋಲಿಸ್‌ ಠಾಣೆಯಲ್ಲಿ ಕೇಸ್ ದಾಖಲು!

masthmagaa.com:

ಒಂದೆಡೆ ನೇಹಾ ವಿಚಾರ ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸ್ತಿದ್ರೆ ಮತ್ತೊಂದೆಡೆ ಯಾದಗಿರಿಯಲ್ಲೂ ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ತಡರಾತ್ರಿ ಯಾದಗಿರಿಯ ರೊಟ್ಟಿ ಕೇಂದ್ರಕ್ಕೆ ರೊಟ್ಟಿ ತರಲು ರಾಕೇಶ್ ಅನ್ನೋ ಯುವಕ ಹೋಗಿದ್ದ ವೇಳೆ, ಫಯಾಜ್ ಅನ್ನೋ ವ್ಯಕ್ತಿಯ ಜೊತೆ ಗಲಾಟೆ ಆಗಿತ್ತು. ಈ ಗಲಾಟೆಯಲ್ಲಿ ರಾಕೇಶ್​ನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ರೊಟ್ಟಿ ಕೇಂದ್ರದ ಸದಸ್ಯ ಫಯಾಜ್ ಸೇರಿದಂತೆ ನಾಲ್ವರು ಕೃತ್ಯ ಎಸಗಿದ್ದಾರೆ ಅಂತೇಳಲಾಗ್ತಿದೆ. ಮೃತ ರಾಕೇಶ್‌ರ ತಾಯಿ ಬಿಜೆಪಿ ಮುಖಂಡರ ನೆರವಿನಿಂದ ಯಾದಗಿರಿ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೋಲಿಸರು ತನಿಖೆ ಶುರು ಮಾಡಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply