ಯಶ್​​ಗೆ 2ನೇ ಮಗು ಜನನ…ಐರಾಗೆ ಸಿಕ್ಕ ತಮ್ಮ…

ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಮನೆಗೆ 2ನೇ ಮಗುವಿನ ಆಗಮನವಾಗಿದೆ. ರಾಕಿಂಗ್ ಸಿಂಡ್ರೆಲಾ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿರೋದಾಗಿ ಕುಟುಂದ ಮೂಲಗಳು ಮಾಹಿತಿ ನೀಡಿದ್ದಾರೆ. ದೀಪಾವಳಿ ಸಂಭ್ರಮದ ಹೊತ್ತಲ್ಲಿ ಜೂನಿಯರ್ ರಾಕಿಂಗ್ ಸ್ಟಾರ್ ಆಗಮನ ಆಗಿರೋದು, ಯಶ್ ಮನೆಯ ಸಡಗರ, ಖುಷಿಯನ್ನ ಹೆಚ್ಚಿಸಿದೆ. ಕಳೆದ ರಾತ್ರಿಯೇ ರಾಧಿಕಾ ಪಂಡಿತ್​ ರನ್ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ರು . ಸದ್ಯ ಮಗು ಹಾಗೂ ರಾಧಿಕಾ ಆರೋಗ್ಯರಾಗಿದ್ದಾರೆ ಅಂತಾ ಆಸ್ಪತ್ರೆ ಮೂಲಗಳು ಕೂಡ ತಿಳಿಸಿವೆ.

Contact Us for Advertisement

Leave a Reply