ಡೆಲ್ಲಿಗೆ ಹೋಗಿದ್ದು ಪರಿಹಾರಕ್ಕಾ..? ಅನರ್ಹರ ಬಗ್ಗೆ ಚರ್ಚೆಗಾ..?

ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಯಾಗಿ 2 ಕೋಟಿ ರೂಪಾಯಿ ಪರಿಹಾರ ಕೇಳಿದ್ದೇವೆ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ನೆರೆ ಪರಿಹಾರಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರೋದಿಲ್ಲ. ಕೇಂದ್ರದ ಬಳಿ 2 ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಿದ್ದೇವೆ. ಅಮಿತ್ ಶಾ ಅವರೇ ಬಂದು ನೆರೆ ಪರಿಸ್ಥಿತಿ ಪರಿಶೀಲಿಸಿರೋದರಿಂದ ಪರಿಹಾರ ನೀಡುವ ಭರವಸೆ ಇದೆ ಅಂತ ಹೇಳಿದ್ದಾರೆ. ಇನ್ನು ಕೇಂದ್ರದ ಬಳಿ ನೆರೆ ಪರಿಹಾರ ಕೇಳಬಾರದು ಎಂದಿದ್ದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಹಾಗೆಲ್ಲಾ ಹೇಳಿಕೆ ಕೊಡಬಾರದು. ನಾನು ಅವರೊಂದಿಗೆ ಮಾತನಾಡುತ್ತೇನೆ ಅಂದ್ರು. ಆದ್ರೆ ಯಡಿಯೂರಪ್ಪ ಅಮಿತ್ ಶಾ ಜೊತೆ ಅನರ್ಹ ಶಾಸಕರ ಬಗ್ಗೆ ಚರ್ಚೆ ನಡೆಸಿದ್ದಾರೆ ಅಂತಲೂ ಹೇಳಲಾಗುತ್ತಿದೆ.

Contact Us for Advertisement

Leave a Reply