ಮೋದಿ, ಅಮಿತ್ ಶಾ ಬರಬೇಕಿಲ್ಲ: ಯಡಿಯೂರಪ್ಪ

ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ಮೋದಿ, ಅಮಿತ್ ಶಾ ಬರಬೇಕಾಗಿಲ್ಲ. ಅವರಿಗೆ ಎಲ್ಲವೂ ಗೊತ್ತು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ವಿದೇಶಕ್ಕೆ ಹೋಗಿದ್ದರು. ಹೀಗಾಗಿ ಪ್ರವಾಹದ ಪರಿಹಾರ ಬಿಡುಗಡೆಯಾಗಿಲ್ಲ. ಸದ್ಯದಲ್ಲೇ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗಲಿದೆ. ಹಾಗಂತ ನಾವೇನೂ ಸುಮ್ಮನೇ ಕುಳಿತಿಲ್ಲ. ಹಣ ಬಿಡುಗಡೆಯಾಗುವವರೆಗೂ ನಾವು ಕಾಯುವುದಿಲ್ಲ. ರಾಜ್ಯ ಸರ್ಕಾರದಿಂದಲೇ ಹಣ ಬಿಡುಗಡೆ ಮಾಡಿದ್ದೇವೆ ಎಂದಿದ್ದಾರೆ. ಇನ್ನು ನಳಿನ್ ಕುಮಾರ್ ಕಟೀಲ್ ಭೇಟಿ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಕೇಂದ್ರದಿಂದ ನೆರೆ ಪರಿಹಾರ ತರುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅಲ್ಲದೆ ಪಕ್ಷ ಬಿಟ್ಟು ಹೊರಹೋದವರಿಗೆ ಪಕ್ಷಕ್ಕೆ ಮರಳುವಂತೆ ಕರೆ ಕೊಟ್ಟಿದ್ದೇವೆ. ಅಷ್ಟು ಬಿಟ್ಟು ಬೇರೇನೂ ಚರ್ಚಿಸಿಲ್ಲ ಅಂದ್ರು.

Contact Us for Advertisement

Leave a Reply