ಯೆಮನ್​​ನಲ್ಲಿ 24 ಗಂಟೆಯಲ್ಲಿ 165 ಹೌತಿಗಳು ಹತ: ಸೌದಿ

masthmagaa.com:

ಯೆಮನ್​​ನಲ್ಲಿ ಹೌತಿಗಳು ಮತ್ತು ಸೌದಿ ನೇತೃತ್ವದ ಸೇನೆಯ ನಡುವಿನ ಜಟಾಪಟಿ ಮುಂದುವರಿದಿದೆ. ಈ ಬಗ್ಗೆ ಪ್ರತಿಕ್ರಿಯಸಿರೋ ಸೌದಿ ನೇತೃತ್ವದ ಸೇನೆ ನಿನ್ನೆ ಒಂದೇ ದಿನ 165 ಮಂದಿ ಹೌತಿ ಬಂಡುಕೋರರನ್ನು ಹೊಡೆದುರುಳಿಸಿದ್ದೀವಿ. ಕಳೆದೊಂದು ವಾರದಲ್ಲಿ ಸಾವಿರಕ್ಕೂ ಹೆಚ್ಚು ಬಂಡುಕೋರರನ್ನು ಹತ್ಯೆ ಮಾಡಿದ್ದೀವಿ ಅಂತ ಹೇಳಿಕೊಂಡಿದೆ. ಮತ್ತೊಂದ್ಕಡೆ ಹೌತಿ ಬಂಡುಕೋರರು ಯೆಮನ್​​ನ ಮಾರಿಬ್​​ ಪ್ರಾಂತ್ಯದ 2 ಜಿಲ್ಲೆಗಳನ್ನು ಕಂಟ್ರೋಲ್​ಗೆ ತಗೊಂಡಿದ್ದೀವಿ ಅಂತ ಘೋಷಿಸಿದ್ದಾರೆ. ಆದ್ರೆ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಂದಹಾಗೆ ಯೆಮನ್​​ನ್ನು ಕಂಟ್ರೋಲ್​ಗೆ ತೆಗೆದುಕೊಳ್ಳಲು, ಯೆಮನ್ ಸರ್ಕಾರದ ವಿರುದ್ಧ ಈ ಬಂಡುಕೋರರು ನಿಂತರವಾಗಿ ದಾಳಿ ನಡೆಸುತ್ತಲೇ ಇದ್ದಾರೆ. ಅವರಿಗೆ ಇರಾನ್ ಬೆಂಬಲವಿದೆ ಅನ್ನೋ ಆರೋಪ ಕೂಡ ಇದೆ. ಅದೇ ರೀತಿ ಯೆಮನ್​​ನ ಸರ್ಕಾರಕ್ಕೆ ಸೌದಿ ನೇತೃತ್ವದ ಒಕ್ಕೂಟ ಬೆಂಬಲ ನೀಡ್ತಿದೆ. ಹೌತಿಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಲೇ ಇದೆ.

-masthmagaa.com

Contact Us for Advertisement

Leave a Reply