‘ದಿ ಕೇರಳ ಸ್ಟೋರಿ’ ಸಿನಿಮಾ ತಂಡಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಯೋಗಿ ಆದಿತ್ಯನಾಥ್!

masthmagaa.com:

ರಿಲೀಸ್ ಅಗೋಕು ಮೊದಲೇ ಸಾಕಷ್ಟು ವಿವಾದ ಎಬ್ಬಿಸಿದ್ದ ‘ದಿ ಕೇರಳ ಸ್ಟೋರಿ‘ ಸಿನಿಮಾ ರಿಲೀಸ್ ಆದ್ಮೇಲೆ ಬಾಕ್ಸ್ ಆಫೀಸ್ ​ನಲ್ಲಿ ಧೂಳ್ ಎಬ್ಬಿಸ್ತಾ ಇದೆ.

ಕೇವಲ ಐದು ದಿನದಲ್ಲಿ ಐವತ್ತು ಕೋಟಿಗೂ ಹೆಚ್ಚು ಹಣವನ್ನು ಈ ಸಿನಿಮಾ ಕಲೆಕ್ಷನ್ ಮಾಡಿತ್ತು. ಆದ್ರೆ ಈಗ ಗುರುವಾರ ಅಂದ್ರೆ ಮೇ 11ರ ಅಂತ್ಯಕ್ಕೆ 81.36 ಕೋಟಿ ಗಳಿಸಿದೆ, ಇನ್ನೆರಡು ಮೂರು ದಿನದಲ್ಲಿ 100 ಕೋಟಿ ಕ್ರಾಸ್ ಮಾಡೋದು ಪಕ್ಕ.

ಸ್ನೇಹಿತರೇ, ಇದರ ಜೊತೆಗೆ ಈ ಸಿನಿಮಾಗೆ ಬಿಜೆಪಿ ಅಧಿಕಾರವಿರುವ ಕೆಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಕೂಡ ಸಿಕ್ಕಿದೆ. ಇದಷ್ಟೇ ಅಲ್ಲದೇ
ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ನೆರವಿನಿಂದ ಈ ಸಿನಿಮಾಗೆ ಭರ್ಜರಿ ಪ್ರಚಾರ ಸಿಕ್ಕಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ಮಧ್ಯ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಸಿಕ್ಕಿದ್ದು, ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿಡಿಯೋ ಮೂಲಕ ಇದೊಂದು ನೋಡಲೇ ಬೇಕಾದ ಸಿನಿಮಾ ಅಂತ ಕರೆ ನೀಡಿದ್ದರು. ಅದರ ಬಳಿಕ ಉತ್ತರ ಪ್ರದೇಶದಲ್ಲಿಯೂ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದರು.
ಇದಾದ ಬಳಿಕ ‘ದಿ ಕೇರಳ ಸ್ಟೋರಿ’ ಸಿನಿಮಾ ತಂಡ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದು ಅವರಿಗೆ ಧನ್ಯವಾದ ಅರ್ಪಿಸಿದೆ. ತಮ್ಮನ್ನು ಭೇಟಿಯಾದ ‘ದಿ ಕೇರಳ ಸ್ಟೋರಿ’ ಸಿನಿಮಾ ತಂಡಕ್ಕೆ ವಿಶೇಷ ಉಡುಗೊರೆಗಳನ್ನು ಸಿಎಂ ಯೋಗಿ ಆದಿತ್ಯನಾಥ್ ನೀಡಿದ್ದಾರೆ. ಭೇಟಿ ವೇಳೆ ನಟಿ ಅದಾ ಶರ್ಮಾ, ನಿರ್ದೇಶಕ ಸುದಿಪ್ತೊ ಸೇನ್, ನಿರ್ಮಾಪಕ ವಿಪುಲ್ ಅಮೃತ್​ಲಾಲ್ ಶಾ ಅವರುಗಳು ಇದ್ದರು.

ಅದಾ ಶರ್ಮಾ ಗೆ ಯೋಗಿ ಅದಿತ್ಯನಾಥ್ ಉಡುಗೊರೆ ಕೊಡುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಈಗ ವೈರಲ್ ಆಗ್ತಾ ಇದೆ. ಅದೇನ್ ಗಿಫ್ಟ್ ಕೊಟ್ಟಿದ್ದಾರೋ ಗೊತ್ತಿಲ್ಲ.
ಒಟ್ನಲ್ಲಿ ಉತ್ತರ ಪ್ರದೇಶದಲ್ಲಿ ತಮ್ಮ ಸಿನಿಮಾಕಗೆ ತೆರಿಗೆ ವಿನಾಯಿತಿ ಘೋಷಿಸಿದ್ದಕ್ಕೆ ಧನ್ಯವಾದ ಅರ್ಪಿಸಲು ಚಿತ್ರತಂಡ ಸಿಎಂ ಅವರನ್ನು ಲಖನೌನಲ್ಲಿ ಭೇಟಿಯಾಗಿತ್ತು.

ಮಧ್ಯ ಪ್ರದೇಶ, ಉತ್ತರ ಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಣೆ ಆಗಿದೆ. ಆದರೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿನಿಮಾಕ್ಕೆ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನ ಕೆಲವೆಡೆ ದಿ ಕೇರಳ ಸ್ಟೋರಿ ಸಿನಿಮಾದ ಪ್ರದರ್ಶನಕ್ಕೆ ಅಡ್ಡಿಪಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಸಿನಿಮಾ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗಿದೆ. ಕೇರಳ ಸರ್ಕಾರವು ಸಹ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ನಲ್ಲಿ 32000 ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರನ್ನ ಜಿಹಾದ್ ಬಲೆಗೆ ಬೀಳಿಸಿ ಇಸ್ಲಾಂ ಗೆ ಮತಾಂತರ ಮಾಡಿ ಅದರಲ್ಲಿ ಕೆಲವರನ್ನ ISIS ಕ್ಯಾಂಪ್ ಗೆ ಕಳಿಸಲಾಗಿದೆ ಅಂತ ಉಲ್ಲೇಖ ಮಾಡಲಾಗಿತ್ತು. ಈ 32000 ಅನ್ನೋ ನಂಬರ್ ಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಅದು ಹೇಗೆ accurate ಆಗಿ 32000 ಅಂತ ಹೇಳ್ತೀರಾ ಇದಕ್ಕೆ ಸೂಕ್ತ ದಾಖಲೆ ಕೊಡಿ ಅಂತ ಹಲವರು ಪ್ರೂಫ್ ಕೇಳಿದ್ದರು. ಇದಾದ ನಂತರ ಚಿತ್ರತಂಡ ಈ ಸಿನಿಮಾದಲ್ಲಿ 32000 ಅಲ್ಲ 3 ಹುಡುಗಿಯರ ಜೀವನದಲ್ಲಿ ನಡೆದ ನೈಜ ಘಟನೆಯನ್ನ ಆಧರಿಸಿ ಸಿನಿಮಾ ಮಾಡಿದ್ದೇವೆ ಅಂಥ ಹೇಳಿಕೊಂಡರು.

ಈಗ ಸಿನಿಮಾದ ಬಿಡುಗಡೆ ಆದ್ಮೇಲೆ ಈ 3 ಜನ ಹುಡುಗಿಯರನ್ನ ಇಸ್ಲಾಂ ಗೆ ಕನ್ವರ್ಟ್ ಮಾಡಿ ISIS ಗೆ ಸೇರಿಸುವ ಹುನ್ನಾರ ಇದ್ದದ್ದು ಬಯಲಾಯ್ತು. ಒಂದು ಹುಡುಗಿ ISIS ಸೇರಿ ಕೊನೆಗೆ ಯುನೈಟೆಡ್ ನೇಶನ್ಸ್ ಕಂಟ್ರೋಲ್ ನಲ್ಲಿ ಇರುವ ಆಫ್ಘನ್ ಜೈಲಲ್ಲಿ ಇವತ್ತಿಗೂ ಇದ್ದಾಳೆ ಅನ್ನೋ ಸತ್ಯವನ್ನ ಸಿನಿಮಾದಲ್ಲಿ ತೋರಿಸಲಾಗಿದೆ.

32000 ಇರ್ಲಿ, 3 ಇರ್ಲಿ ಅಥವಾ ಒಂದೇ ಇರಲಿ. ನಮ್ಮ ದೇಶಕ್ಕೆ ಸಂಚಕಾರ ತರಬಲ್ಲ ಈ ರೀತಿಯ ಕೃತ್ಯ ಆಗ್ತಾ ಇದೆ ಅಂತ ಆದ್ರೆ ಅದರಿಂದ ನಮ್ಮ ಭದ್ರತೆಗೆ ಸಂಚಕಾರ ಅಲ್ವಾ? ಇದೇ ವಿಷಯಕ್ಕೆ ಸಂಬಂಧಪಟ್ಟ ನೈಜ ಘಟನೆಗಳನ್ನೇ ಆಧರಿಸಿ awareness ಮೂಡಿಸುವ ಕೆಲಸವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ.

ಇನ್ನು ಈ ಸಿನಿಮಾದ ಕಥೆ ಕೇರಳದ ಬಗ್ಗೆ ಆಗಿದ್ರೂ ಕೂಡ ಸಿನಿಮಾದ ವಿರುದ್ಧ ಕೇರಳ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕೇರಳದಲ್ಲಿ ಸಿನಿಮಾ ಬಿಡುಗಡೆ ಆಗದಂತೆ ತಡೆಯಲು ಕಾನೂನು ಹೋರಾಟವನ್ನು ಮಾಡಿತು. ಆದರೆ ಸಿನಿಮಾ ನಿಷೇಧಕ್ಕೆ ಒಪ್ಪದ ನ್ಯಾಯಾಲಯ ಕೇರಳ ಸರ್ಕಾರದ ಮನವಿಯನ್ನು ತಳ್ಳಿ ಹಾಕಿತು.

ಇದೀಗ ದಿ ಕೇರಳ ಸ್ಟೋರಿ ಸಿನಿಮಾ, ದೇಶದ ಹಲವು ನಗರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆ ಆದ ಕೇವಲ ಐದು ದಿನಕ್ಕೆ 56 ಕೋಟಿ ಮಾಡಿ, 7 ದಿನಕ್ಕೆ 80 ಕೋಟಿ ದಾಟಿ, 100 ಕೋಟಿ ದಾಟುವ ಹಂತಕ್ಕೆ ಬಂದು ನಿಂತಿದೆ.

-masthmagaa.com

Contact Us for Advertisement

Leave a Reply