ಬಂದಿದೆ ಕಲರ್ ಬದಲಿಸೋ ಕಾರು! ಇದು ನಿಜನಾ?

masthmagaa.com:

ಎಲ್ಲರಿಗೂ ಒಂದೊಂದು ಕಲರ್​​​ ಮೇಲೆ ವಿಶೇಷವಾದ ಆಕರ್ಷಣೆ ಇರುತ್ತೆ. ಹೀಗಾಗಿ ವಾಹನ ಖರೀದಿಸುವಾಗ ಆ ಕಲರ್​​ಗೆ ವಿಶೇಷ ಆದ್ಯತೆ ಕೊಡ್ತಾರೆ. ಆದ್ರೆ ಇನ್ನು ಕೆಲವರಿಗೆ ತುಂಬಾ ಕಲರ್ ಆಸೆ ಇರುತ್ತೆ. ಹೀಗಾಗಿ ವಾಹನ ಖರೀದಿಸುವಾಗ ಫುಲ್ ಕನ್​ಫ್ಯೂಸ್ ಆಗ್ಬಿಡ್ತಾರೆ. ಅಂಥೋರಿಗೆ ಅಂತ ಈಗ ಹೊಸ ಕಾರ್ ಒಂದು ಬರ್ತಿದೆ. ಅದ್ರಲ್ಲಿ ಒಂದು ಬಟನ್ ಒತ್ತಿದ್ರೆ ಸಾಕು, ಗೋಸುಂಬೆ ರೀತಿ ಕಾರ್ ಬಣ್ಣ ಬದಲಿಸಿಬಿಡುತ್ತೆ. ಜರ್ಮನಿಯ ಲಕ್ಸುರಿ ಕಾರ್ ಕಂಪನಿ ಬಿಎಂಡಬ್ಲ್ಯೂ ಇಂಥದ್ದೊಂದು ಕಾರ್ ಅಭಿವೃದ್ಧಿಪಡಿಸಿದೆ. ಬಿಎಂಡಬ್ಲ್ಯೂ 9 ಕಾರ್​​​​​​ ನಿಮಿಷದಲ್ಲಿ ತನ್ನ ಬಣ್ಣ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ವರ್ಷದ ಅತಿದೊಡ್ಡ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋನಲ್ಲಿ ಈ ಕಾರನ್ನು ಪ್ರದರ್ಶನಕ್ಕೆ ಇಡಲು ನಿರ್ಧರಿಸಲಾಗಿದೆ. ಆದ್ರೆ ಎಷ್ಟು ಬಾರಿ ಕಲರ್ ಚೇಂಜ್ ಆಗುತ್ತೆ. ಯಾವ್ಯಾವ ಕಲರ್ ಆಗುತ್ತೆ ಅನ್ನೋದ್ರ ಬಗ್ಗೆ ಇನ್ನೂ ಸಂಸ್ಥೆ ಕಡೆಯಿಂದ ಮಾಹಿತಿ ಬಂದಿಲ್ಲ. ಅದನ್ನು ಎಕ್ಸಿಬಿಷನ್​​ನಲ್ಲೇ ಹೇಳೋ ಸಾಧ್ಯತೆ ಇದೆ. ಟ್ವಿಟ್ಟರ್​ನಲ್ಲಿ ಇದ್ರ ವಿಡಿಯೋ ಹರಿದಾಡ್ತಿದ್ದು, ಕಾರು ಬಟನ್ ಒತ್ತುತ್ತಲೇ ಬಣ್ಣ ಬದಲಾಯಿಸೋದನ್ನು ನೋಡಬಹುದಾಗಿದೆ. ಇದು ಫೇಕ್​​ ವಿಡಿಯೋ, ಎಡಿಟಿಂಗ್ ಮಾಡಿ ಹೀಗೆ ಮಾಡಲಾಗಿದೆ ಅಂತ ಕೆಲ ಬಳಕೆದಾರರು ಕಮೆಂಟ್ ಕೂಡ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply