ಸೈನಾ ನೆಹ್ವಾಲ್ ಬಳಿ ಕ್ಷಮೆಯಾಚಿಸಿದ ನಟ ಸಿದ್ಧಾರ್ಥ್!

masthmagaa.com:

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ನಟ ಸಿದ್ಧಾರ್ಥ್ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಭದ್ರತಾ ವೈಫಲ್ಯ ಸಂಭವಿಸಿದಾಗ ಸೈನಾ ನೆಹ್ವಾಲ್​​ ಕಳವಳ ವ್ಯಕ್ತಪಡಿಸಿದ್ರು. ಆದ್ರೆ ಈ ಬಗ್ಗೆ ಸಿದ್ಧಾರ್ಥ್ ಅಶ್ಲೀಲವಾಗಿ ರಿಪ್ಲೇ ಮಾಡಿದ್ರು. ಇದು ಭಾರಿ ಆಕ್ರೋಶಕ್ಕೆ ಕಾರಣವಾದ ಬಳಿಕ ಓಪನ್ ಲೆಟರ್ ಟ್ವೀಟ್ ಮಾಡಿರೋ ಅವರು, ನೀವು ಯಾವಾಗಲೂ ನನ್ನ ಚಾಂಪಿಯನ್‌ ಆಗಿರ್ತೀರಿ..ಕೆಲವು ದಿನಗಳ ಹಿಂದೆ ನೀವು ಮಾಡಿದ ಟ್ವೀಟ್‌ಗೆ ನಾನು ರೂಡ್‌ ಆಗಿ ಜೋಕ್‌ ಮಾಡಿದ್ದೆ. ನಾನು ನಿಮ್ಮ ಹಲವಾರು ವಿಚಾರಗಳನ್ನ ವಿರೋಧಿಸ್ತೇನೆ. ಆದ್ರೆ ನಾನು ಈಗ ಸಿಟ್ಟು ಮಾಡಿಕೊಂಡ್ರು ವಿರೋಧಿಸಿದ್ರು ನಾನು ಬಳಸಿದ ಪದಗಳನ್ನ ಸಮರ್ಥಿಸಿಕೊಳ್ಳಲು ಸಾಧ್ಯ ಇಲ್ಲ. ಹಾಗೆ ಒಂದು ಜೋಕನ್ನ ವಿವರಿಸಬೇಕಾಗಿ ಬಂದ್ರೆ ಅದು ಒಳ್ಳೆಯ ಜೋಕ್‌ ಅಲ್ಲ. ಹಾಗಾಗಿ ನಾನು ಕ್ಷಮೆ ಕೇಳ್ತಾ ಇದ್ದೇನೆ ಅಂತ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply