ರಾಜ ಪರಂಪರೆ ಬೇಡ ಎನ್ನುತ್ತಿರುವ ಬ್ರಿಟನ್‌ ಯುವಕರು

masthmagaa.com:

ಇಂಗ್ಲೆಂಡ್​​ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ರೂ ಕೂಡ ರಾಣಿಯೇ ಅಲ್ಲಿನ ನಾಮಮಾತ್ರ ಮುಖ್ಯಸ್ಥರಾಗಿದ್ಧಾರೆ. ಆದ್ರೀಗ ದೇಶದ ಯುವಪೀಳಿಗೆ ಪರಂಪರೆಯನ್ನು ತೆಗೆದು ಹಾಕಲು ಬಯಸುತ್ತಿದೆ ಹೊಸ ಸರ್ವೇಯೊಂದು ಹೇಳಿದೆ. YouGov ಅನ್ನೋ ಸಂಸ್ಥೆ ಒಂದು ಸಮೀಕ್ಷೆ ನಡೆಸಿದ್ದು ಅದರಲ್ಲಿ 18ರಿಂದೆ 24 ವರ್ಷದವರ ಪೈಕಿ 41 ಪರ್ಸೆಂಟ್​​​ನಷ್ಟು ಜನ ಚುನಾಯಿತ ಪ್ರತಿನಿಧಿಗಳೇ ಹೆಡ್​ ಆಫ್ ದಿ ಸ್ಟೇಟ್​​ ಆಗಬೇಕು ಅಂತ ಹೇಳಿದ್ರೆ, 31 ಪರ್ಸೆಂಟ್ ಜನ ಮಾತ್ರ ರಾಣಿಯೇ ಹೆಡ್​ ಆಫ್​ ದಿ ಸ್ಟೇಟ್​ ಆಗಿರಬೇಕು. ರಾಜಪರಂಪರೆ ಮುಂದುವರಿಯಬೇಕು ಎಂದಿದ್ದಾರೆ. ಅಂದಹಾಗೆ 1066ರಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್​ ಮತ್ತು ವೇಲ್ಸ್ ಸಪರೇಟ್ ಆಗಿದ್ವು. ಆದ್ರೆ ಈ ವೇಳೆ ವಿಲಿಯಂ ಆಕ್ರಮಣಕಾರಿಯಾಗಿ ಮುನ್ನುಗ್ಗಿ ಈ ಎಲ್ಲವನ್ನೂ ಒಗ್ಗೂಡಿಸಿ, ಈ ಸಾಮ್ರಾಜ್ಯವನ್ನು ಸ್ಥಾಪಿಸಿದ್ರು. ಅಲ್ಲಿಂದ ಇಲ್ಲಿಯವರೆಗೂ ಈ ರಾಜಕುಟುಂಬ ಅಸ್ತಿತ್ವದಲ್ಲಿದೆ.

-masthmagaa.com

Contact Us for Advertisement

Leave a Reply