ಈ ದಂಪತಿಗಿರುವ ವಿಚಿತ್ರ ಆಸೆ ಏನು ಗೊತ್ತಾ?

masthmagaa.com:

ಮನುಷ್ಯರಿಗೆ ಒಂದಲ್ಲಾ ಒಂದು ಚಿಂತೆ ಇದ್ದೇ ಇರುತ್ತೆ. ದುಡ್ಡಿಲ್ಲದಿದ್ರೆ ದುಡಿಯೋ ಚಿಂತೆ.. ದುಡ್ಡಿದ್ದೋರಿಗೆ ಊರಲ್ಲೇ ಇಲ್ಲದ ಚಿಂತೆಗಳು. ಅದೇ ರೀತಿ ಇಲ್ಲೊಂದು ಕೋಟ್ಯಾಧಿಪತಿ ದಂಪತಿ 105 ಮಕ್ಕಳನ್ನು ಪಡೆಯೋ ಗುರಿ ಇಟ್ಕೊಂಡಿದೆ. ಈ ಮೂಲಕ ಇಡೀ ವಿಶ್ವದ ಅತಿ ದೊಡ್ಡ ಕುಟುಂಬವನ್ನು ಹೊಂದಬೇಕು ಅನ್ನೋದು ಈ ದಂಪತಿಯ ಉದ್ದೇಶ.. ಮೋಸ್ಟ್ಲಿ ಈ ದಂಪತಿ ಮಹಾಭಾರತದ ದೃತರಾಷ್ಟ್ರ ಮತ್ತು ಗಾಂಧಾರಿ ದಂಪತಿಯ ಕಥೆಯಿಂದ ಪ್ರೇರಿತರಾಗಿದ್ದಾರೋ ಏನೋ.. ಒಟ್ನಲ್ಲಿ ಅದೇ ರೀತಿಯ ಆಸೆ ಇಟ್ಕೊಂಡಿದ್ದಾರೆ. ಅಂದಹಾಗೆ ರಷ್ಯಾದ 23 ವರ್ಷದ ಕ್ರಿಸ್ಟಿನಾ ಮತ್ತು 56 ವರ್ಷದ ಗೈಲೀಪ್ ಈ ದಂಪತಿ. ಗೈಲೀಪ್ ಓರ್ವ ಕೋಟ್ಯಾಧಿಪತಿ ಬ್ಯುಸಿನೆಸ್ ಮ್ಯಾನ್​. ಸದ್ಯ ಈ ದಂಪತಿಗೆ 11 ಮಕ್ಕಳಿವೆ.. 23 ವರ್ಷದ ಯುವತಿಗೆ 11 ಮಕ್ಕಳಾ ಅಂತ ಗಾಬರಿಯಾಗ್ಬೇಡಿ.. ಈ ದಂಪತಿ ತಮ್ಮ ಶತಕ ಬಾರಿಸೋ ಗುರಿ ಸಾಧಿಸಲು ಸೆರೋಗಸಿಯ ಮೊರೆ ಹೋಗಿದ್ದಾರೆ. ಸೆರೋಗಸಿ ಅಂದ್ರೆ ಬೇರೆ ದಂಪತಿಗಾಗಿ ಗರ್ಭ ಧರಿಸಿ, ಮಕ್ಕಳು ಜನಿಸಿದ ಬಳಿಕ ಮಕ್ಕಳನ್ನು ದಂಪತಿಗೆ ವಹಿಸೋದು.. 9 ತಿಂಗಳು ಹೆತ್ತು ಹೊರೋದು ಬೇರೆಯೋರು.. ನಂತರ ಆ ಮಕ್ಕಳ ತಂದೆ-ತಾಯಿಯಾಗಿ ಸಾಕೋರು ಬೇರೆಯೋರು.. ರಷ್ಯಾಗೆ ಹತ್ತಿರದಲ್ಲಿರೋ ಯುಕ್ರೇನ್​ನಲ್ಲಿ ಇದು ದೊಡ್ಡ ಮಟ್ಟದಲ್ಲಿ ನಡೆಯುತ್ತೆ ಅಂತ ನಾವು ಈ ಹಿಂದೆಯೇ ಸುತ್ತುಜಗತ್ತಿನಲ್ಲಿ ಹೇಳಿದ್ವಿ.

-masthmagaa.com

Contact Us for Advertisement

Leave a Reply