ಮಾರುಕಟ್ಟೆಗೆ ಲಸಿಕೆ ಬಿಟ್ಟ ಪಾಕ್​: ಲಸಿಕಾ ಕೇಂದ್ರಗಳಲ್ಲಿ ಜನವೋ ಜನ

masthmagaa.com:

ಪಾಕಿಸ್ತಾನದಲ್ಲಿ ಕೊರೋನಾ ಲಸಿಕೆಯನ್ನ ಮಾರುಕಟ್ಟೆಗೆ ಬಿಡಲಾಗಿದೆ. ಅಂದ್ರೆ ಯಾರ್ ಬೇಕಾದ್ರೂ ದುಡ್ಡು ಕೊಟ್ಟು ಲಸಿಕೆಯನ್ನ ಹಾಕಿಸಿಕೊಳ್ಳಬಹುದು. ಸರ್ಕಾರ ಹೇಳಿದಂತೆ ಇವ್ರೇ ಹಾಕಿಸಿಕೊಳ್ಳಬೇಕು, ಈ ಏಜ್​ನವರು ಮಾತ್ರ ಚುಚ್ಚಿಸಿಕೊಳ್ಳಬೇಕು ಅಂತಿಲ್ಲ. ಇದಕ್ಕೆ ಪಾಕಿಸ್ತಾನದಲ್ಲಿ ಉತ್ತಮ ರೆಸ್ಪಾನ್ಸ್​ ವ್ಯಕ್ತವಾಗಿದೆ. ಯುವ ಜನತೆ ಅಂತು ನಾ ಮುಂದು ತಾ ಮುಂದು ಅಂತ ದುಡ್ಡುಕೊಟ್ಟು ಲಸಿಕೆ ಚುಚ್ಚಿಸಿಕೊಳ್ತಿದ್ಧಾರೆ. ಕರಾಚಿಯ ಕೆಲವೊಂದು ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಸೋಲ್ಡ್ ಔಟ್ ಆಗಿದೆಯಂತೆ. ಸದ್ಯ ರಷ್ಯಾದಿಂದ ಆಮದು ಮಾಡಿಕೊಂಡಿರೋ ಸ್ಪುಟ್ನಿಕ್​ ಲಸಿಕೆಯನ್ನ ಮಾರ್ಕೆಟ್​ಗೆ ಬಿಡುಗಡೆ ಮಾಡಲಾಗಿದೆ.

ಇದರ ಎರಡು ಡೋಸ್​ಗೆ ಪಾಕಿಸ್ತಾನದ 12,000 ರೂಪಾಯಿ ಕೊಡ್ಬೇಕು. ಭಾರತದ ರೂಪಾಯಿ ಲೆಕ್ಕದಲ್ಲಿ ಆಲ್ಮೋಸ್ಟ್ ಅರ್ಧಕ್ಕರ್ಧ ಆಗುತ್ತೆ. ಅಂದ್ರೆ ಸುಮಾರು 6 ಸಾವಿರ ರೂಪಾಯಿ. ಲಸಿಕೆ ಇಷ್ಟು ದುಬಾರಿಯಾದ್ರೂ ಭಾರಿ ಡಿಮ್ಯಾಂಡ್ ಬಂದಿದೆ. ಪಾಕ್​ನಲ್ಲಿ ಸರ್ಕಾರ ನಡೆಸುತ್ತಿರೋ ಲಸಿಕೆ ಅಭಿಯಾನದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು 50 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಾಕಲಾಗ್ತಿತ್ತು. ಆದ್ರೀಗ ಲಸಿಕೆಯನ್ನ ಮಾರ್ಕೆಟ್​ಗೆ ಬಿಟ್ಟಿರೋದ್ರಿಂದ ದುಡ್ಡು ಇರೋರೆಲ್ಲಾ ಲಸಿಕೆ ಚುಚ್ಚಿಸಿಕೊಳ್ತಿದ್ದಾರೆ.

-masthmagaa.com

Contact Us for Advertisement

Leave a Reply