ಯುಟ್ಯೂಬ್‌ಗೂ ಕಾಲಿಡಲಿದೆ AI! ಗೂಗಲ್‌ ಹೇಳಿದ್ದೇನು?

masthmagaa.com:

ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿರೊ AI ಇದೀಗ ಯುಟ್ಯೂಬ್‌ಗೂ ಕಾಲಿಡೋಕೆ ರೆಡಿಯಾಗಿದೆ. ಯುಟ್ಯೂಬ್‌ನಲ್ಲಿ ಈ ಎಕ್ಸ್‌ಪಿರಿಮೆಂಟ್‌ ಮಾಡೋಕೆ ಗೂಗಲ್‌ ಮುಂದಾಗಿದೆ. ಮೊದಲ ಹಂತದಲ್ಲಿ ಕಾಮೆಂಟ್‌ಗಳನ್ನ ಈಸಿಯಾಗಿ ಅರ್ಥ ಮಾಡಿಕೊಳ್ಳೋಕೆ AI ಟೆಕ್ನಾಲಜಿಯನ್ನ ಬಳಸಲಾಗುತ್ತೆ ಅಂತ ಗೂಗಲ್‌ ಹೇಳಿದೆ. AI ಟೆಕ್ನಾಲಜಿಯಿಂದ ಕಾಮೆಂಟ್‌ಗಳನ್ನ ಟಾಪಿಕ್ಸ್‌ ವೈಸ್‌ ಡಿವೈಡ್ ಮಾಡೋಕೆ ಕಾಮೆಂಟ್‌ ಸೆಕ್ಷನ್‌ ಓಪನ್‌ ಮಾಡಿದಾಗ ಹೊಸ ಆಪ್ಶನ್‌ ಒಂದು ಇರುತ್ತೆ. ಈ ಮೂಲಕ ಕಾಂಟೆಂಟ್‌ ಕ್ರಿಯೇಟರ್‌ಗಳಿಗೆ ತಮ್ಮ ಆಡಿಯನ್ಸ್‌ ಜೊತೆಗೆ ಇಂಟರ್ಯಾಕ್ಟ್‌ ಮಾಡೋಕೆ ಈಸಿಯಾಗುತ್ತೆ. ಅಲ್ದೇ ತಮ್ಮ ಕಾಂಟೆಂಟ್‌ಗೆ ಹೊಸ ಐಡಿಯಾಗಳನ್ನ ಹುಡುಕೋಕೆ ಈ ಡಿಸ್ಕಶನ್‌ಗಳು ಹೆಲ್ಪ್‌ ಆಗಲಿವೆ ಅಂತ ಹೇಳಲಾಗಿದೆ. ಇದರ ಜೊತೆಗೆ ಯುಟ್ಯೂಬ್‌ ವೀಕ್ಷಕರಿಗೆ ಅವ್ರು ನೋಡ್ತಿರುವ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕೂಡ ಈ AI ಯೂಸ್‌ ಆಗಲಿದೆ. ಕಾಮೆಂಟ್‌ ಸೆಕ್ಷನ್‌ನಲ್ಲಿ ʻಆಸ್ಕ್‌ʼ ಅನ್ನೊ ಆಪ್ಶನ್‌ ಮೇಲೆ ಟ್ಯಾಪ್‌ ಮಾಡಿ, ವಿಡಿಯೋ ರಿಲೇಟೆಡ್‌ ಮಾಹಿತಿಯನ್ನ ಕೇಳಬಹುದು ಅಂತ ಗೂಗಲ್‌ ಹೇಳಿದೆ. ಸದ್ಯ ಈ ಫೀಚರ್‌ಗಳು ಟೆಸ್ಟಿಂಗ್‌ ಹಂತದಲ್ಲಿದ್ದು, ಆರಂಭದಲ್ಲಿ ಯುಟ್ಯೂಬ್‌ ಪ್ರಿಮೀಯಂ ಮೆಂಬರ್‌ಗಳಿಗೆ ಮಾತ್ರ ಈ ಆಪ್ಷನ್‌ಗಳು ಸಿಗಬಹುದು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply