ಏರ್‌ಪೋರ್ಟ್‌ನಲ್ಲಿ ವಿಡಿಯೋ ಮಾಡಿ ಕೊನೆಗೂ ಅರೆಸ್ಟ್‌ ಆದ ಯುಟ್ಯೂಬರ್!

masthmagaa.com:

ಭದ್ರತಾ ಲೋಪ ಉಂಟಾಗಿದೆ ಅಂತೇಳಿ ಆರೋಪಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ ಮಾಡಿದ ಯುಟ್ಯೂಬರ್‌ನೊಬ್ಬ ಪೋಲಿಸರು ತಡವಾಗಿ ಬಂಧಿಸಿರೊ ಘಟನೆ ಬೆಂಗಳೂರಿನ ಕೆಂಪೇಗೌಡ ಏರಪೋರ್ಟ್‌ನಲ್ಲಿ ನಡೆದಿದೆ. ವಿಕಾಸ್‌ ಗೌಡ ಹೆಸರಿನ ಈ ಯುಟ್ಯೂಬರ್‌ ಏಪ್ರಿಲ್‌ 7ರ ರಾತ್ರಿ 12 ಗಂಟೆಗೆ ಚೆನ್ನೈಗೆ ಹೊರಡೊ ಫ್ಲೈಟ್‌ ಟಿಕೆಟ್‌ ತಗೊಂಡು ಏರ್‌ಪೋರ್ಟ್‌ಗೆ ಬಂದಿದ್ದ. ಆದ್ರೆ ಈತ ಬೇಕಂತಲೆ ಆ ಫ್ಲೈಟ್‌ ಹತ್ತದೆ, ಏರ್‌ಪೋರ್ಟ್‌ನ ವಿಡಿಯೋ ಮಾಡಿದ್ದಾನೆ. ಅಲ್ದೇ ತಾನು 24 ಗಂಟೆ ಏರ್‌ಪೋರ್ಟ್‌ನಲ್ಲಿದೆ ಅಂತೇಳಿದ್ದ. ಆದ್ರೆ ಆತ 7-8 ಗಂಟೆ ಮಾತ್ರ ವಿಮಾನ ನಿಲ್ದಾಣದಲ್ಲಿದ್ದ ಅಂತ ಪೋಲಿಸರು ತಿಳಿಸಿದ್ದಾರೆ.

-mastmagaa.com

Contact Us for Advertisement

Leave a Reply