ಧೋನಿ ನಿವೃತ್ತಿ ಬಗ್ಗೆ ಯುವಿ ಹೇಳಿದ್ದೇನು..?

ವಿಶ್ವಕಪ್ ಮುಗಿಯುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಗ್ಗೆ ಚರ್ಚೆ ಜೋರಾಗುತ್ತಿದೆ. 2 ದಿನಗಳ ಹಿಂದಷ್ಟೇ ಸುನಿಲ್ ಗವಾಸ್ಕರ್ ಕೂಡ ಧೋನಿಗೆ ನಿವೃತ್ತಿ ಸಮಯ ಬಂದಿದೆ. ತಂಡದಿಂದ ಹೊರದಬ್ಬುವ ಮೊದಲು ಅವರೇ ನಿವೃತ್ತಿ ಪಡೆಯೋದು ಒಳ್ಳೆಯದು ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಧೋನಿ ಪರ ಬ್ಯಾಟ್ ಬೀಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಯುವಿ, ಭಾರತೀಯ ಕ್ರಿಕೆಟ್‍ಗೆ ಧೋನಿ ಕೊಡುಗೆ ತುಂಬಾ ಇದೆ. ಭಾರತದ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಹಾಗಾಗಿ ಅವರದ್ದೇ ಆದ ಸಮಯವನ್ನು ನೀಡಬೇಕು. ನಿವೃತ್ತಿ ಬಗೆಗಿನ ಚರ್ಚೆಗಳು ಉಚಿತವಲ್ಲ. ರಿಷಬ್ ಪಂಥ್ ಜೊತೆ ಧೋನಿ ಹೋಲಿಕೆ ಸರಿಯಲ್ಲ. ಧೋನಿಯ ಹಂತಕ್ಕೆ ತಲುಪಲು ರಿಷಬ್ ಪಂಥ್‍ಗೆ ತುಂಬಾ ವರ್ಷಗಳೇ ಬೇಕಿದೆ ಎಂದಿದ್ದಾರೆ. ಅಲ್ಲದೆ ಧೋನಿ ಯಾವಾಗ ನಿವೃತ್ತಿ ಹೊಂದಬೇಕು ಎಂದು ಅವರೇ ನಿರ್ಧರಿಸುತ್ತಾರೆ. ಆಡಲು ಬಯಸಿದರೂ ಅವರ ನಿರ್ಧಾರವನ್ನು ನಾವು ಗೌರವಿಸಬೇಕು ಅಂತ ಮನವಿ ಮಾಡಿದ್ದಾರೆ. ವಿಶ್ವಕಪ್ ಬಳಿಕ ವಿಶ್ರಾಂತಿಯಲ್ಲಿರುವ ಧೋನಿ, ಭಾರತೀಯ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಹುದ್ದೆಯನ್ನು ನಿರ್ವಹಿಸಿದ್ರು.

Contact Us for Advertisement

Leave a Reply