“ಯುವರತ್ನ” ಸಿನಿಮಾ ವಿಮರ್ಶೆ

masthmagaa.com:

ವಿದ್ಯೆಯನ್ನ ಪದವಿ ಮೂಲಕ ತಲುಪಿಸಿದರೆ ಅದು ಬ್ಯುಸಿನೆಸ್, ಜ್ಞಾನದ ಮೂಲಕ ತಲುಪಿಸಿದರೆ ಅದು ಸರ್ವಿಸ್‌ ಅಂತ RK University ಪ್ರೊಫೆಸರ್ ಪ್ರಕಾಶ್ ರಾಜ್ ಕೊನೆ ಶಾಟ್ ಅಲ್ಲಿ ಹೇಳೋ ಡೈಲಾಗ್ ಗೆ ಥೇಟರ್ ಅಲ್ಲಿ ಬರೋ ಪ್ರೇಕ್ಷಕರ ಶಿಳ್ಳೆ ಯಲ್ಲಿ ಸಿನಿಮಾನ ಸಂಪೂರ್ಣವಾಗಿ ಎಂಜಾಯ್ ಮಾಡಿದ ಒಂದು ಧನ್ಯತಾ ಭಾವ ಇತ್ತು.

ಸಂತೋಷ್ ಆನಂದ್ ರಾಮ್ ಅವರು ಪುನೀತ್ ರಾಜ್ ಕುಮಾರ್ ಅಂತ ದೊಡ್ಡ ರೀಚ್ ಇರುವ ಸ್ಟಾರ್ ನ ಇಟ್ಟುಕೊಂಡು ಶಿಕ್ಷಣ ವ್ಯವಸ್ಥೆ ನ ಪ್ರಶ್ನಿಸೋದರ ಜೊತೆಗೆ ಅಲ್ಲಲ್ಲೇ ಚಿಕ್ಕದಾಗಿ ಸ್ಮಾರ್ಟ್ ಆಗಿ ಆ ವ್ಯವಸ್ಥೆಯಲ್ಲಿ ಯಾವ ರೀತಿ ಸುಧಾರಣೆ ತರಬಹುದು ಅಂತ ಹೇಳುವ ವಿಚಾರನಾ ಕಥಾ ವಸ್ತು ಮಾಡಿಕೊಂಡು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೂ ಬೇಸರ ಆಗದಂತೆ ಕೆಲವು ಮಾಸ್ ಎಲಿಮೆಂಟ್ಸ್ ಇಟ್ಟುಕೊಂಡು ಈ ಚಿತ್ರ ಮಾಡಿರೋದಕ್ಕೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು.

ಒಟ್ನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನ ಬರೀ ಒಬ್ಬ ಡೀಸೆಂಟ್, ಡಿಪ್ಲೊಮ್ಯಾಟಿಕ್, ಅಥವಾ ಅವರನ್ನ ಅವರ ಆಕಾಶ್, ಅರಸು, ಪೃಥ್ವಿಸಿನಿಮಾಗಳಲ್ಲಿ ತೋರಿಸಿರೋ ಹಾಗೆ he is just a nice man ಅನ್ನೋ ಇಮೇಜ್ ನ ಹೊರತು ಪಡಿಸಿ ಬೇರೆ ಬೇರೆ shades ನಲ್ಲಿ present ಮಾಡೋ ಪ್ರಯತ್ನ ಈ ಚಿತ್ರದಲ್ಲಿ ಆಗಿದೆ, ಅದನ್ನ ಪುನೀತ್ ರಾಜ್ ಕುಮಾರ್ ಅವರು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ ಕೂಡ, ಒಟ್ನಲ್ಲಿ ಚಿತ್ರ ನೋಡಿ ಹೊರಗೆ ಬಂದಾಗ ಒಂದು ರೀತಿ ಹೊಸ ಪುನೀತ್ ರಾಜ್ ಕುಮಾರ್ ನೋಡಿದ ಹಾಗೆ ಆಯಿತು ಅಂತ ಆನಿಸದೆ ಇರಲ್ಲ. ಡ್ಯಾನ್ಸ್, ಫೈಟ್ಸ್ ಸೇರಿದಂತೆ ಇಡೀ ಚಿತ್ರಾನ ಪುನೀತ್ ಅವರು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ಪ್ರೇಕ್ಷಕರಿಗೆ ದಾಟಿಸಿದ್ದಾರೆ.

ಶಿಕ್ಷಣ ಕ್ಷೇತ್ರವನ್ನು ತನ್ನ ಅಂಕೆಯಲ್ಲೇ ಇಟ್ಟುಕೊಳ್ಳಬೇಕು, ಸರಕಾರಿ ವಿದ್ಯಾ ಸಂಸ್ಥೆಗಳನ್ನ ಹೇಳ ಹೆಸರಿಲ್ಲದ ಹಾಗೆ ಮಾಡಬೇಕು ಅನ್ನೋ ಉದ್ದೇಶ ಇರೋ ಒಬ್ಬ ಕಾರ್ಪೊರೇಟ್ ಬ್ಯುಸಿನೆಸ್ ಮೆನ್ ಜೋಸೆಫ್ ಆಂಟೋನಿ, ಅವನ ಉದ್ದೇಶಕ್ಕೆ ಸಾಥ್ ಕೊಡೋ ಮಿನಿಸ್ಟರ್, ಪ್ರೊಫೆಸರ್ ಇತ್ಯಾದಿ ಇತ್ಯಾದಿ. ಸರಕಾರಿ ವಿದ್ಯಾ ಸಂಸ್ಥೆನ ಮಾದರಿಯಾಗಿ ನಿಲ್ಲಿಸಬೇಕು ಎಂಬ ಬೃಹದಾಸೆ ಇಟ್ಟುಕೊಂಡಿರೋ RK ಯೂನಿವರ್ಸಿಟಿ ಪ್ರಿನ್ಸಿಪಾಲ್. ಇವರಿಬ್ಬರ ನಡುವೆ ನಡೆಯುವ ಆಂತರಿಕ ಜಗಳವನ್ನ ತನ್ನದಾಗಿಸಿಕೊಳ್ಳೋ ನಾಯಕ. ಮೊದಲೇ ಹೇಳಿದ ಹಾಗೆ ಚಿತ್ರದ ಕಥಾ ವಸ್ತು ಅದ್ಭುತ. ಆದರೆ ಅಷ್ಟೇ ಅದ್ಭುತವಾಗಿ ಅದನ್ನ ತೆರೆ ಮೇಲೆ ತೋರಿಸಿದ್ದಾರ ಅನ್ನೋದನ್ನ ನೀವು ಚಿತ್ರವನ್ನ ನೋಡಿಯೇ ತಿಳಿದುಕೊಬೇಕು.

ಚಿತ್ರದ ನಾಯಕಿ ಸಯ್ಯೇಶ ಅವರನ್ನ ಕೇವಲ ಡ್ಯಾನ್ಸ್ ಗೆ ಸೀಮಿತ ಮಾಡಿದ್ದು ಚಿತ್ರದ ಮೈನಸ್ ಅಂಶಗಳಲ್ಲಿ ಒಂದು. ಚಿತ್ರದ ಮೊದಲ ಭಾಗದಲ್ಲಿ ಅವರು ಆಗಾಗ ನಾಯಕನ ಕ್ರಷ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರಿಗೂ ನಾಯಕನ ಮೇಲೆ ಕ್ರಷ್ ಆಗತ್ತೆ. ಆದ್ರೆ ಚಿತ್ರದ second half ನಲ್ಲಿ ಚಿತ್ರದ ಮುಖ್ಯ ಕಥೆಗೂ ಅವರಿಗೂ ಸಂಬಂಧವೇ ಇಲ್ಲವೇನೋ, ಅದೇ ಆಗ್ಲೇ ಹೇಳಿದ ಹಾಗೆ ಅವರು ನಾಯಕನಿಗೆ ಕೇವಲ ಕ್ರಷ್ ಆಗಿಯೇ ಉಳಿದುಕೊಂಡು ಬಿಡ್ತಾರೆ. ಲವರ್ ಆಗೋದೇ ಇಲ್ಲ.

ಚಿತ್ರದ ಹಾಡುಗಳು ಮತ್ತೆ ಮತ್ತೆ ಕೇಳೋ ಥರ ಇಲ್ಲದೆ ಇದ್ರೂ picturisation ಚೆನ್ನಾಗಿದೆ. ಇನ್ನು ಫೈಟ್ಸ್ ವಿಷಯಕ್ಕೆ ಬಂದ್ರೆ ಆರ್ಥೋ ಪೇಡಿಕ್ ಲ್ಯಾಬ್ ಅಲ್ಲಿ ಆಗೋ ಫೈಟ್ ತುಂಬಾ creative ಆಗಿದೆ.

ಈ review ನಲ್ಲಿ ಚಿತ್ರದಲ್ಲಿ ಬರೋ ಉಳಿದ ಪಾತ್ರಗಳ ಬಗ್ಗೆ ಹೆಚ್ಚು ಹೇಳೋಕೆ ಆಗ್ದೇ ಇದ್ರೂ ಡಾಲಿ ಧನಂಜಯ್, ದಿಗಂತ್, ಸಾಯಿ ಕುಮಾರ್, ಪ್ರಕಾಶ್ ರಾಜ್ ಹಾಗೆ ಆ college bell ಹೊಡೆಯೋ ತಾತ ಈ ಪಾತ್ರಗಳು ನಿಮ್ಮನ್ನ ತಕ್ಕ ಮಟ್ಟಿಗೆ ಕಾಡತ್ತೆ.

ಕೊನೆಯದಾಗಿ ಈ ಚಿತ್ರದ ಫಸ್ಟ್ ಹಾಫ್ ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಗೆ ಹಬ್ಬ ಹಾಗೆ ಸೆಕೆಂಡ್ ಹಾಫ್ ಇಡೀ ಕರ್ನಾಟಕದ ಜನತೆಗೆ ಒಂದು ಫೀಲ್ ಗುಡ್ ಸಿನಿಮಾ with a meaningful message.

-masthmagaa.com:

Contact Us for Advertisement

Leave a Reply