ಹಿಜಬ್ ವಿವಾದಕ್ಕೆ ದಂಗಲ್ ನಟಿ ಹೇಳಿದ್ದೇನು ಗೊತ್ತಾ?

masthmagaa.com:

ಬಾಲಿವುಡ್​​ ನಟ ಆಮೀರ್ ಖಾನ್ ನಟನೆಯ ದಂಗಲ್ ಸಿನಿಮಾದ ನಟಿ ಝೈರಾ iವಾಸಿಂ ಹಿಜಬ್ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ. ಹಿಜಬ್ ಧರಿಸೋದು ಆಯ್ಕೆಯಲ್ಲ.. ಅದು ಹೊಣೆಗಾರಿಕೆ.. ಮಹಿಳೆ ಹಿಜಬ್ ಧರಿಸೋ ಮೂಲಕ ತಾನು ಇಷ್ಟ ಪಡುವ ದೇವರು ತನಗೆ ವಿಧಿಸಿದ ಹೊಣೆಯನ್ನು ಪೂರೈಸುತ್ತಾಳೆ.. ಮಹಿಳೆಯರು ಧಾರ್ಮಿಕ ಬದ್ಧತೆಯನ್ನು ನಿರ್ವಹಿಸೋದನ್ನು ತಡೆದು ಕಿರುಕುಳ ನೀಡ್ತಿರೋ ವ್ಯವಸ್ಥೆಯನ್ನು ವಿರೋಧಿಸ್ತೀನಿ ಅಂತ ಹೇಳಿದ್ದಾರೆ. ಜೊತೆಗೆ ಮುಸ್ಲಿಂ ಮಹಿಳೆಯರಿಗೆ ಪಕ್ಷಪಾತ ಮಾಡಿ, ಹಿಜಬ್ ಅಥವಾ ಶಿಕ್ಷಣ ಎರಡರಲ್ಲಿ ಒಂದನ್ನುಆಯ್ಕೆ ಮಾಡ್ಬೇಕು ಅನ್ನೋ ವ್ಯವಸ್ಥೆ ತರೋದು ಅನ್ಯಾಯ ಅಂತ ಸೋಷಿಯಲ್ ಮೀಡಿಯಾದಲ್ಲಿ ಲೆಟರ್ ಪೋಸ್ಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply