ಸೋನಿ ಜೊತೆಗೆ ಬ್ರೇಕ್‌ಅಪ್‌! ಡಿಸ್ನಿ ಒಪ್ಪಂದದಿಂದಲೂ ಹಿಮ್ಮೆಟ್ಟಿದ ಝೀ಼!

masthmagaa.com:

ಸೋನಿ ಜೊತೆಗಿನ ಬ್ರೇಕ್‌ಅಪ್‌ನಿಂದ ಸಂಕಷ್ಟಕ್ಕೆ ಸಿಲುಕಿರೋ ಝೀ಼ ಈಗ ಮತ್ತೊಂದು ಒಪ್ಪಂದದಿಂದ ಬ್ಯಾಕ್‌ಔಟ್‌ ಆಗಿದೆ. ಕ್ರಿಕೆಟ್‌ ಪ್ರಸಾರದಲ್ಲಿ ತೊಡಗಿಕೊಂಡಿರೋ ವಾಲ್ಟ್‌ ಡಿಸ್ನಿ ಜೊತೆ 1.4 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 11.6 ಸಾವಿರ ಕೋಟಿ ಮೌಲ್ಯದ ಒಪ್ಪಂದ ಮಾಡ್ಕೊಂಡಿತ್ತು. ಕೆಲ ICC ಪಂದ್ಯಗಳನ್ನ ಪ್ರಸಾರ ಮಾಡೋಕೆ ಇದ್ರಲ್ಲ ಕೆಲ ಪ್ರಸಾರ ಹಕ್ಕುಗಳನ್ನ ಖರೀದಿಸಲಾಗಿತ್ತು. ಆದ್ರೆ ಈ ಒಪ್ಪಂದದಿಂದ ಝೀ಼ ಈಗ ಹಿಂದೆ ಸರಿದಿದೆ. ಈ ಒಪ್ಪಂದದ ಭಾಗವಾಗಿ ಝೀ಼ ಕಂತುಗಳಲ್ಲಿ ಹಣ ಪೂರೈಸಬೇಕಿತ್ತು. ಆದ್ರೆ ಸೋನಿ ವಿಲೀನ ಒಪ್ಪಂದ ಮುರಿದು ಬಿದ್ದಿದ್ರಿಂದ 200 ಮಿಲಿಯನ್‌ ಡಾಲರ್‌ಗಳ ಮೊದಲ ಕಂತನ್ನೇ ಪಾವತಿ ಮಾಡೋಕಾಗಿಲ್ಲ. ಹೀಗಾಗಿ ಈಗ ಪೂರ್ತಿ ಒಪ್ಪಂದದಿಂದಲೇ ದೂರವಾಗಿದೆ. ಸದ್ಯ ಝೀ಼ ಸಂಕಷ್ಟ ಪರಿಸ್ಥಿತಿಲಿ ಇದೆ. 5 ವರ್ಷದ ಹಿಂದೆ ಝೀ ಜಾಹಿರಾತು ಆದಾಯದಿಂದ 600 ಮಿಲಿಯನ್‌ ಗಳಿಸಿತ್ತು. ಆದ್ರೆ 2022-23ರಲ್ಲಿ ಕೇವಲ 488 ಮಿಲಿಯನ್‌ ಡಾಲರ್‌ ಗಳಿಸಿದೆ. ಕ್ಯಾಶ್‌ ರಿಸರ್ವ್‌ 116 ಮಿಲಿಯನ್‌ ಡಾಲರ್‌ನಿಂದ 86 ಮಿಲಿಯನ್‌ ಡಾಲರ್‌ಗೆ ಕುಸಿದಿದೆ.

-masthmagaa.com

Contact Us for Advertisement

Leave a Reply