ಮುಗಿಯದ ಝೀ-ಸೋನಿ ವಿಲೀನ ಒದ್ದಾಟ! ಜೀ ಮೇಲೆ ಡಿಸ್ನಿ ಮುನಿಸು!

masthmagaa.com:

ಝೀ಼-ಸೋನಿ ಸುದ್ದಿಗಳು ವಿಲೀನ ಒಪ್ಪಂದ ಮುರಿದು ಬಿದ್ರು ಮುಗೀತಿಲ್ಲ. ಒಳ್ಳೇ ಧಾರವಾಹಿ ಥರ ಪ್ರತಿದಿನ ಹೊಸ ಹೊಸ ಎಪಿಸೋಡ್‌ಗಳು ಬರ್ತಾನೆ ಇವೆ. ಝೀ಼ ಜೊತೆಗೆ ಸೋನಿ ಬ್ರೇಕ್‌ಅಪ್‌ ಮಾಡ್ಕೊಂಡ ಬಳಿಕ ಅತ್ತ ಝೀ಼ ಕೂಡ ಡಿಸ್ನಿ ಹಾಟ್‌ಸ್ಟಾರ್‌ ಜೊತೆಗೆ ಒಂದು ಒಪ್ಪಂದದಿಂದನೂ ಹಿಂದೆ ಸರಿದಿತ್ತು. ಈಗ ಈ ಸಂಬಂಧ ಡಿಸ್ನಿ ಲೀಗಲ್‌ ಆಕ್ಷನ್‌ ತೆಗೆದುಕೊಳ್ಳೋದಾಗಿ ಹೇಳಿದೆ. ICC ಕ್ರಿಕೆಟ್‌ ಪಂದ್ಯಗಳನ್ನ ಪ್ರಸಾರ ಮಾಡೋಕೆ ಝೀ಼, ಡಿಸ್ನಿ ಜೊತೆಗೆ ಸುಮಾರು 1.5 ಬಿಲಿಯನ್‌ ಡಾಲರ್‌ ಮೌಲ್ಯದ ಸಬ್‌ ಲೈಸೆನ್ಸಿಂಗ್‌ ಅಗ್ರೀಮೆಂಟ್‌ ಮಾಡ್ಕೊಂಡಿತ್ತು. ಸೋನಿ ಜೊತೆಗೆ ವಿಲೀನ ಆದ್ಮೇಲೆ ಈ ಹಣ ಪಾವತಿಸಬೇಕು ಅಂತ ಝೀ಼ ಅಂದ್ಕೊಂಡಿತ್ತು. ಆದ್ರೆ ಆ ಒಪ್ಪಂದ ಮುರಿದುಬಿದ್ದಿದ್ರಿಂದ ಝೀ಼, ಡಿಸ್ನಿ ಒಪ್ಪಂದದಿಂದ ಹಿಂದೆ ಸರಿಯಬೇಕಾಗಿದೆ. ಇದ್ರಿಂದ ಈಗಾಗಲೇ ಹಲವಾರು ಕಾನೂನು ತೊಡಕುಗಳನ್ನ ಎದುರಿಸ್ತಿರೋ ಝೀ಼ ಮತ್ತೊಂದು ಕೇಸ್‌ನ್ನ ಎದುರಿಸಬೇಕಾಗಿದೆ. ಮತ್ತೊಂದ್‌ ಕಡೆ ಸೋನಿಯೊಂದಿಗಿನ ವಿಲೀನ ಒಪ್ಪಂದ ಯಾಕೆ ಬ್ರೇಕ್‌ ಆಯ್ತು ಎಕ್ಸ್‌ಪ್ಲೇನ್‌ ಮಾಡಿ ಅಂತ ಜೀ ಹೂಡಿಕೆದಾರರು ಕಂಪನಿಗೆ ಪತ್ರ ಬರೆದಿದ್ದಾರೆ. ಅತ್ತ ಜೀ ಮಾಲಿಕ ಸುಭಾಷ್‌ ಚಂದ್ರ ಕಂಪನಿಯಲ್ಲಿ ತಮ್ಮ ಪಾಲುದಾರಿಕೆಯನ್ನ ಈಗಿರೋ 5%ನಿಂದ 26%ಗೆ ಏರಿಸ್ತೀವಿ ಅಂದಿದ್ದಾರೆ.

-masthmagaa.com

Contact Us for Advertisement

Leave a Reply