ರಷ್ಯಾ ಜೊತೆಗಿನ ಸಂಬಂಧ ಭಾರತದ ಹಿತಾಸಕ್ತಿಗೆ ಒಳ್ಳೇದಲ್ಲ: ಅಮೆರಿಕ

masthmagaa.com:

ರಷ್ಯಾದ ರಕ್ಷಣಾ ಉಪಕರಣಗಳ ಮೇಲೆ ಬಂಡವಾಳ ಹೂಡೋಕೆ ಭಾರತದ ಹಿತಾಸಕ್ತಿಗೆ ಒಳ್ಳೇದಲ್ಲ ಅಂತ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಹೇಳಿದ್ದಾರೆ. ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ರಷ್ಯಾ ವಿರುದ್ದ ಯಾಕಿಲ್ಲ, ನಮ್ಮ ಜೊತೆ ಸೇರ್ದೇನೇ ಅವ್ರು ಇನ್ನೂ ಕೂಡ ರಷ್ಯಾದ ಆಯುಧಗಳನ್ನೇ ಖರೀದಿಸ್ತಿದ್ದಾರೆ ಅಲಾ ಅನ್ನೋ ಕಾಂಗ್ರೆಸ್‌ ಸದಸ್ಯರೊಬ್ಬರ ಮಾತಿಗೆ ಉತ್ತರಿಸಿದ ಆಸ್ಟಿನ್​, ಭಾರತಕ್ಕೆ ರಷ್ಯಾದ ಆಯುಧಗಳನ್ನ ಖರೀದಿ ಮಾಡೋಕೆ ಇಷ್ಟವಿಲ್ಲ. ಆದ್ರೆ ಅವರು ಈಗಾಗಲೇ ರಷ್ಯಾದ ಮಿಲಿಟರಿ ಆಯುಧಗಳ ಮೇಲೆ ಡಿಪೆಂಡ್‌ ಆಗ್ಬಿಟ್ಟಿದ್ದಾರೆ. ನಮಗೆ ಅದು ಅರ್ಥವಾಗುತ್ತೆ. ಆದ್ರೆ ನಾವು ಕೂಡ ಜಗತ್ತಿನಲ್ಲೇ ಅತ್ಯುತ್ತಮ ಆಯುಧಗಳನ್ನ ಹೊಂದಿದ್ದೀವಿ. ಭಾರತದ ಜೊತೆಗೆ ರಕ್ಷಣಾ ಕ್ಷೇತ್ರದ ಸಹಕಾರವನ್ನ ನಾವು ಮುಂದುವರೆಸ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply