12 ವರ್ಷ ಮೇಲ್ಪಟ್ಟವರಿಗೆ ಸದ್ಯದಲ್ಲೇ ಸಿಗಲಿದೆ ಲಸಿಕೆ: ಡಾ.ವಿ.ಕೆ ಪೌಲ್

masthmagaa.com:

ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಕಳೆದ ತಿಂಗಳೇ ಅನುಮೋದನೆ ಕೊಟ್ಟಿದ್ದ ಝೈಕೋವ್​-ಡಿ (ZyCoV-D) ಕೊರೋನಾ ಲಸಿಕೆಯನ್ನ ರಾಷ್ಟ್ರೀಯ ಲಸಿಕಾ ಅಭಿಯಾನಕ್ಕೆ ಬಳಸಿಕೊಳ್ಳಲಾಗುವುದು ಅಂತ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಹೇಳಿದ್ದಾರೆ. 12 ವರ್ಷ ಮೇಲ್ಪಟ್ಟವರಿಗೆ ಹಾಕುವ ಈ ಲಸಿಕೆಗೆ ಎಷ್ಟು ರೇಟ್​ ಫಿಕ್ಸ್ ಮಾಡ್ಬೇಕು ಅನ್ನೋ ಬಗ್ಗೆಯೂ ಚರ್ಚೆ ನಡೀತಿದೆ ಎಂದಿದ್ದಾರೆ. ಇಡೀ ಜಗತ್ತಿನಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ಹಾಕ್ತಿರೋರ ಪ್ರಮಾಣ ಕಮ್ಮಿ ಇದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದುವರೆಗೆ ಮಕ್ಕಳನ್ನ ಜನರಲ್​ ವ್ಯಾಕ್ಸಿನೇಷನ್​​ಗೆ ಒಳಪಡಿಸಲು ಶಿಫಾರಸು ಮಾಡಿಲ್ಲ. ಆದ್ರೆ ಭಯಪಡುವ ಅಗತ್ಯವಿಲ್ಲ ಅಂತ ಡಾ.ವಿ.ಕೆ. ಪೌಲ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply