ಮಡಗಾಸ್ಕರ್‌ನಲ್ಲಿ ಕಾಲ್ತುಳಿತಕ್ಕೆ 12 ಮಂದಿ ಬಲಿ!

masthmagaa.com:

ಮಡಗಾಸ್ಕರ್‌ನ ರಾಜಧಾನಿ ಅಂಟಾನಾನರಿವೋದ ಸ್ಟೇಡಿಯಂವೊಂದ್ರಲ್ಲಿ ಕಾಲ್ತುಳಿತ ಉಂಟಾಗಿದ್ದು, 12 ಜನ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸುಮಾರು 80 ಮಂದಿ ಗಾಯಗೊಂಡಿದ್ದಾರೆ. ಇಂಡಿಯನ್‌ ಓಷನ್‌ ಐಲ್ಯಾಂಡ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಮಾರು 50 ಸಾವಿರ ಪ್ರೇಕ್ಷರು ಬಂದಿದ್ದರು. ಈ ವೇಳೆ ಬರಿಯಾ ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ಜನರ ತಳ್ಳಾಟದಿಂದ ಸಾವು ನೋವು ಸಂಭವಿಸಿದೆ ಅಂತ ಮಡಗಾಸ್ಕರ್‌ ಅಧ್ಯಕ್ಷ ಆಂಡ್ರಿ ರಾಜೋಲಿನಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply