ಒಂದೇ ದಿನ 131 ‘ಮಹಾ’ ಪೊಲೀಸರಿಗೆ ಸೋಂಕು, ಇಬ್ಬರು ಬಲಿ..!

masthmagaa.com:

ಮಹಾರಾಷ್ಟ್ರ: ಕೊರೋನಾ ಆರ್ಭಟಕ್ಕೆ ನಲುಗಿ ಹೋಗಿರೋ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 131 ಪೊಲೀಸರಿಗೆ ಸೋಂಕು ತಗುಲಿದೆ. ಜೊತೆಗೆ ಇಬ್ಬರು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ ಅಂತ ಮಹಾರಾಷ್ಟ್ರ ಪೊಲೀಸ್ ಇಲಾಖೆ ತಿಳಿಸಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕಾಯಿಲೆ ದೃಢಪಟ್ಟ ಪೊಲೀಸರ ಸಂಖ್ಯೆ 2,095ಕ್ಕೆ ಏರಿಕೆಯಾಗಿದೆ. 22 ಮಂದಿ ಪೊಲೀಸರು ಇದುವರೆಗೆ ಮೃತಪಟ್ಟಿದ್ದಾರೆ.

2,095 ಸೋಂಕಿತ ಪೊಲೀಸರ ಪೈಕಿ 897 ಮಂದಿ ಗುಣಮುಖರಾಗಿದ್ದಾರೆ. ಆದ್ರೆ ಇನ್ನೂ ಕೂಡ 1,178 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಅತಿ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ ರಾಜ್ಯ ಎನಿಸಿಕೊಂಡಿದೆ ಮಹಾರಾಷ್ಟ್ರ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕಾನೂನು ಪಾಲನೆ, ಶಾಂತಿ, ಸುವ್ಯವಸ್ಥೆ ಕಾಪಾಡಲು ಹಗಲಿರುಳು ಕೆಲಸ ಮಾಡುತ್ತಿರೋ ಪೊಲೀಸರಿಗೇ ಸೋಂಕು ಹರಡುತ್ತಿರೋದು ಆತಂಕದ ವಿಚಾರ.

ಮಹಾರಾಷ್ಟ್ರದಲ್ಲಿ ಇದುವರೆಗೆ ಬರೋಬ್ಬರಿ 57,000 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 1900 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರಿರುವ ರಾಜ್ಯವಾಗಿದೆ ಮಹಾರಾಷ್ಟ್ರ. ವಾಣಿಜ್ಯ ನಗರಿ ಮುಂಬೈ ಒಂದರಲ್ಲೇ 32,000ಕ್ಕೂ ಹೆಚ್ಚು ಜನರಿಗೆ ಕಾಯಿಲೆ ಹರಡಿರೋದು ಸರ್ಕಾರದ ಚಿಂತೆ ಹೆಚ್ಚಿಸಿದೆ.

-masthmagaa.com

Contact Us for Advertisement

Leave a Reply