ಜಮ್ಮು ಕಾಶ್ಮೀರದ ಬಸ್‍ಸ್ಟಾಂಡ್‍ನಲ್ಲಿ ದಾಳಿ ಸಂಚು ವಿಫಲ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಲ್ಲುತ್ತಲೇ ಇಲ್ಲ. ಜಮ್ಮವಿನ ಬಸ್ ಸ್ಟಾಂಡ್ ಒಂದರಲ್ಲಿ 15 ಕೆಜಿ ಸ್ಫೋಟಕಗಳನ್ನು ಪತ್ತೆಹಚ್ಚಲಾಗಿದೆ. ಈ ಮೂಲಕ ಸೇನಾಪಡೆ ದೊಡ್ಡ ಮಟ್ಟದ ಉಗ್ರ ದಾಳಿಯನ್ನು ತಡೆದಿದ್ದಾರೆ. ಈ ಬ್ಯಾಗ್ ಕಥುವಾದ ಬಿಲಾವರ್‍ನಿಂದ ಬರುತ್ತಿತ್ತು. ಈಗ ಭಾರಿ ಪ್ರಮಾಣದ ಈ ಸ್ಫೋಟಕಗಳ ಬಗ್ಗೆ ತನಿಖೆ ನಡೆಯುತ್ತಿದೆ. ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ನಡೆಸಲಾಗುತ್ತಿದೆ.

ಬಸ್‍ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾದ ಬೆನ್ನಲ್ಲೇ ಭದ್ರತಾ ಪಡೆಗೆ ಮಾಹಿತಿ ನೀಡಲಾಯ್ತು. ಬಸ್ ಸ್ಟಾಂಡ್ ಬಳಿ ಬಸ್ ನಿಲ್ಲಿಸಿದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿ, ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.

Contact Us for Advertisement

Leave a Reply