ಡಿಆರ್​​ಡಿಒದ 2ಡಿಜಿ​ ಔಷಧಿಯನ್ನು ಹೇಗೆ ಬಳಸಬೇಕು ಗೊತ್ತಾ?

masthmagaa.com:

ಕೊರೋನಾ ಸೋಂಕಿಗೆ ಡಿಆರ್​ಡಿಒ ಅಭಿವೃದ್ಧಿಪಡಿಸಿರೋ 2ಡಿಜಿ ಅಥವಾ 2-ಡಿಯಾಕ್ಸಿ-ಡಿ-ಗ್ಲೂಕೋಸ್​ ಔಷಧಿಯನ್ನ ಹೇಗೆ ಬಳಸಬೇಕು ಅನ್ನೋದಕ್ಕೆ ಸಂಬಂಧಿಸಿದಂತೆ ನಿರ್ದೇಶನವನ್ನ ಡಿಆರ್​ಡಿಒ ಇವತ್ತು ಶೇರ್ ಮಾಡಿದೆ. ಈ ಔಷಧಿಯನ್ನ ಚಿಕಿತ್ಸೆ ಪಡೀತಿರೋ ಕೊರೋನಾ ರೋಗಿಗಳಿಗೆ ವೈದ್ಯರ ಸಲಹೆ ಮೇರೆಗೆ ಕೊಡಬಹುದು. ಗಂಭೀರ ಮತ್ತು ಮಧ್ಯಮ ಪ್ರಮಾಣದ ರೋಗಿಗಳಿಗೆ ಗರಿಷ್ಠ 10 ದಿನಗಳವರೆಗೆ ಮಾತ್ರ ನೀಡಬೇಕು. ಆದ್ರೆ ಅನ್​ಕಂಟ್ರೋಲ್ಡ್​ ಡಯಾಬಿಟಿಸ್, ಗಂಭೀರ ಹೃದಯ ಸಮಸ್ಯೆ, ತೀವ್ರ ಉಸಿರಾಟದ ಸಮಸ್ಯೆ, ಯಕೃತ್ ಮತ್ತು ಮೂತ್ರಪಿಂಡದ ಗಂಭೀರ ಸಮಸ್ಯೆಯಿಂದ ಬಳಲುತ್ತಿರೋರ ಮೇಲೆ ಈ 2ಡಿಜಿ ಔಷಧಿಯನ್ನ ಪ್ರಯೋಗ ಮಾಡಿಲ್ಲ. ಹೀಗಾಗಿ ಅಂಥವರಿಗೆ ಈ ಔಷಧಿ ನೀಡುವ ಮೊದಲು ಎಚ್ಚರ ವಹಿಸಬೇಕು. ಇನ್ನು ಗರ್ಭಿಣಿಯರು, ಮಕ್ಕಳಿಗೆ ಎದೆ ಹಾಲುಣಿಸುವ ತಾಯಂದಿರು ಮತ್ತು 18 ವರ್ಷದೊಳಗಿನ ರೋಗಿಗಳಿಗೆ ಈ 2ಡಿಜಿ ಔಷಧಿಯನ್ನ ಕೊಡಬಾರದು ಅಂತಾನೂ ಸ್ಪಷ್ಟವಾಗಿ ಹೇಳಲಾಗಿದೆ. ಜೊತೆಗೆ ರೋಗಿಗಳು ಅಥವಾ ಅವರನ್ನ ನೋಡಿಕೊಳ್ತಿರೋರು 2ಡಿಜಿ ಔಷಧಿ ಬೇಕಿದ್ದರೆ ಆಸ್ಪತ್ರೆ ಮೂಲಕ ಡಾ. ರೆಡ್ಡೀಸ್ ಲ್ಯಾಬೊರೇಟರಿಯಿಂದ ಪಡೆಯಲು ಸೂಚಿಸಲಾಗಿದೆ. ಅದಕ್ಕಾಗಿ ಇ-ಮೇಲ್ ಐಡಿಯನ್ನ ಕೂಡ ನೀಡಲಾಗಿದೆ.

-masthmagaa.com

Contact Us for Advertisement

Leave a Reply