45 ಕೆಜಿ ತೂಕವಿದ್ದ ಎರಡೂವರೆ ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ!

masthmagaa.com:

ಎರಡೂವರೆ ವರ್ಷದ ಮಕ್ಕಳು ಎಷ್ಟು ತೂಕ ಇರ್ತಾರೆ. 12..ಅಬ್ಬಬ್ಬಾ ಅಂದ್ರೆ 15 ಕೆಜಿ ಇರಬಹುದು. ಆದ್ರೆ ಇಲ್ಲೊಂದು ಮಗು 45 ತೂಕ ಇತ್ತು. ಸದ್ಯ ಎರಡೂವರೆ ವರ್ಷದ ಈ ಹೆಣ್ಣು ಮಗುವಿಗೆ ದೆಹಲಿ ಆಸ್ಪತ್ರೆಯಲ್ಲಿ ಬೇರಿಯಾಟ್ರಿಕ್​​ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಳೆದೊಂದು ದಶಕದಲ್ಲೇ ಈ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಯಂಗೆಸ್ಟ್ ಮಗು ಇದಾಗಿದೆ. ಈ ಆಪರೇಷನ್​​ನಲ್ಲಿ ಹೊಟ್ಟೆಯ ಆಹಾರದ ಚೀಲವನ್ನು ಚಿಕ್ಕದು ಮಾಡಲಾಗುತ್ತೆ. ಇದ್ರಿಂದ ಕಡಿಮೆ ಆಹಾರ ಸಾಕಾಗುತ್ತೆ. ಈ ಮೂಲಕ ಹಸಿವು ಕಡಿಮೆಯಾಗಿ, ತೂಕ ಕೂಡ ಇಳಿಕೆಯಾಗುತ್ತೆ. ಅಂದಹಾಗೆ ಈ ಮಗು ಹುಟ್ಟುವಾಗ ನಾರ್ಮಲ್ ಆಗಿ ಎರಡೂವರೆ ಕೆಜಿಯೇ ಇತ್ತು. ಆದ್ರೆ ಮುಂದಿನ 6 ತಿಂಗಳಲ್ಲಿ ಅದ್ರ ತೂಕ 14 ಕೆಜಿಗೆ ಏರಿಕೆಯಾಗಿದೆ. ಅದೇ ರೀತಿ ಜಾಸ್ತಿಯಾಗಿ ಆಗಿ ಎರಡೂವರೆ ವರ್ಷ ಆಗುವಾಗ ಆಕೆಯ ತೂಕ 45 ಕೆಜಿಯಷ್ಟಾಗಿದೆ.

-masthmagaa.com

Contact Us for Advertisement

Leave a Reply